* ಬಂಟ್ವಾಳ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಯನ್ನು ಸರಿಪಡಿಸಲು ಒತ್ತಾಯಿಸಿ ಆಸ್ಪತ್ರೆ ಯ ಮುಂದೆ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ಯಿಂದ ಪ್ರತಿಭಟನೆ ನಡೆಸಿ ಸರಕಾರಕ್ಕೆ ಆರೋಗ್ಯ ಅಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಿ.ವೈ.ಎಫ್.ಐ. ಜಿಲ್ಲಾ ಕಾರ್ಯ ದರ್ಶಿ ಸಂತೋಷ್ ಬಜಾಲ್ ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವುದು ಸರಕಾರಗಳ ಕರ್ತವ್ಯ ವಾಗಿದ್ದು ಆದರೆ ಇಂದು ಸರಕಾರಗಳು ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು ಸರಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ಒದಗುಸುವುದಿಲ್ಲ ಎಂದು ಆರೋಪಿಸಿದರು, ಬಂಟ್ವಾಳ ಸರಕಾರಿ ಆಸ್ಪತ್ರೆಯು ಹಲವು ಸಮಸ್ಯೆ ಗಳಿಂದ ಕೂಡಿದ್ದು ಸಮಸ್ಯೆ ಗಳ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟವಾದಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಮಾತನಾಡಿ ಇಲ್ಲಿನ ಜನಪ್ರತಿನಿಧಿಗಳು ಜನರ ಸಮಸ್ಯೆ ಪರಿಹರಿಸುವುದರ ಬದಲು ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಕಚ್ಚಾಡುವಂತೆ ಮಾಡಿ ಜನರನ್ನು ನೈಜ ಸಮಸ್ಯೆ ಗಳ ಬಗ್ಗೆ ಯೋಚನೆ ಮಾಡದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತುಳಸೀದಾಸ್ ವಿಟ್ಲ ಸ್ವಾಗತಿಸಿದರು , ತಾಲೂಕು ಅದಕ್ಷರಾದ ಸುರೇಂದ್ರ ಕೋಟ್ಯಾನ್ ಬಂಟ್ವಾಳ, ದೇವದಾಸ್ ಕುಲಾಲ್, ರತ್ನಾಕರ ಜಕ್ರಿಬೆಟ್ಟು , ಸಾಮಾಜಿಕ ಹೋರಾಟಗಾರ ರಾಜ ಚೆಂಡ್ತಿಮಾರ್, ಡಿ.ವೈ.ಎಫ್ ಐ ಮಾಜಿ ಮುಖಂಡರಾದ ಉದಯ ಕುಮಾರ್ ಬಂಟ್ವಾಳ , ಜನಾರ್ಧನ ಕುಲಾಲ್, ಮುಖಂಡರಾದ ಸಾಧಿಕ್ ಬಂಟ್ವಾಳ , ಸೌಕತ್ ಆಲಿ ಖಾನ್ , ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ , ಕಾರ್ಮಿಕ ಮುಖಂಡರಾದ ಸಂಜೀವ ಬಂಗೇರ , ಲಿಯಕತ್ ಖಾನ್ ,ಪ್ರಜಾ ಪರಿವರ್ತನಾ ವೇದಿಕೆಯ ಕೃಷ್ಣಪ್ಪ ಪುದ್ದೊಟ್ಟು, ನಾರಾಯಣ, ಮಹಿಳಾ ಸಂಘಟನೆಯ ಮಖಂಡರುಗಳು ಭಾಗವಹಿಸಿದ್ದರು