ಬಂಟ್ವಾಳ: ಅನುದಾನ ಕೊರತೆಯಿಂದ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ಈಡೇರಿಸಲಾಗದ ಪರಿಸ್ಥಿತಿ ಇದ್ದು, ಹಳ್ಳಿಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾ.ಪಂ.ನಿರ್ಣಯಗಳಿಗೆ ಸ್ಪಂದನೆ ನೀಡುವ ಕಾರ್ಯವಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.

ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾ.ಪಂ.ಗೆ ಅವರು ಭೇಟಿ ನೀಡಿ ಸ್ಥಳೀಯ ಜನಪ್ರತಿನಿಽಗಳ ಜತೆ ಚರ್ಚೆ ನಡೆಸಿದರು. ಗ್ರಾಮೀಣ ಭಾಗಗಳಲ್ಲಿ ವಸತಿ ಯೋಜನೆಯನ್ನು ನಿಗಮಕ್ಕೆ ನೀಡಿದ ಬಳಿಕ ಸಾಕಷ್ಟು ತಾಂತ್ರಿಕ ತೊಂದರೆಗಳು ಕಂಡುಬರುತ್ತಿದೆ. ಜತೆಗೆ ಬಾಪೂಜಿ ಸೇವಾ ಕೇಂದ್ರಗಳಿಗೆ ಮರುಜೀವ ನೀಡುವ ಕೆಲಸ ಆಗಬೇಕಿದೆ. ನೂತನವಾಗಿರುವ ಕೆಡಿಪಿ ಸಭೆಯಲ್ಲೂ ಕೊಂಚ ಬದಲಾವಣೆಗಳು ಆಗಬೇಕಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗ್ರಾ.ಪಂ.ಗಳಿಗೆ ಅನುದಾನ ಹೆಚ್ಚಳದ ಕುರಿತು ಸಭಾಪತಿಗಳಲ್ಲಿ ಮನವಿ ಮಾಡಿದರು. ಗ್ರಾ.ಪಂ.ಅಧ್ಯಕ್ಷೆ ಸುಮಿತ್ರಾ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಲಕ್ಷೀ÷್ಮನಾರಾಯಣ ಗೌಡ, ಸದಸ್ಯರಾದ ಸಂಜೀವ ಪೂಜಾರಿ, ಸುರೇಶ್ ಪೂಜಾರಿ, ಮಾಜಿ ಅಧ್ಯಕ್ಷ ದೇವಪ್ಪ ಕುಲಾಲ್ ಅವರು ವಿವಿಧ ಮನವಿಗಳನ್ನು ತಿಳಿಸಿದರು.
ಬಂಟ್ವಾಳ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾ.ಪಂ.ಕಾರ್ಯನಿರ್ವಹಣಾಽಕಾರಿ ರಾಜಣ್ಣ, ಗ್ರಾ.ಪಂ.ಅಭಿವೃದ್ಧಿ ಅಽಕಾರಿ ವೇದಾ, ಗ್ರಾಮಕರಣಿಕ ಕುಮಾರ್, ಸದಸ್ಯರಾದ ದಯಾನಂದ ಗೌಡ, ಹರೀಶ್ ಪೂಜಾರಿ, ಬಾಲಕೃಷ್ಣ ಪೂಜಾರಿ, ವಿಶ್ವನಾಥ ಶೆಟ್ಟಿ, ಪೂವಪ್ಪ ಮೆಂಡನ್, ಶಾಲಿನಿ ಶ್ರೀನಿವಾಸ್, ಶಾಲಿನಿ ಜಗದೀಶ್, ರೂಪಶ್ರೀ, ಶಶಿಕಲಾ, ಸುಮತಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here