ಬಂಟ್ವಾಳ, ನ. ೧೨: ಪಂಜಿಕಲ್ಲು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಮತದಾನ ನಡೆಯಿತು. ಚುನಾವಣಾಽಕಾರಿ ಎಂಜಿನಿಯರ್ ಮಹೇಶ್ ಹಾಗೂ ಸಹಾಯಕ ಚುನಾವಣಾಽಕಾರಿ ಶಿಕ್ಷಕ ಕಮಲಾಕ್ಷ ಅವರು ಸೇರಿದಂತೆ ಚುನಾವಣಾ ಸಿಬಂದಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.


ಪೊಲೀಸ್ ಸಿಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಅವರು ಮತಗಟ್ಟೆಗೆ ಭೇಟಿ ನೀಡಿ ಶಾಂತಿಯುತ ಮತದಾನದ ಕುರಿತು ಪರಿಶೀಲಿಸಿದರು.
ಗ್ರಾ.ಪಂ.ನ ತೆರವಾದ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ ಡಿ.ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುರೇಶ್ ಜೆ.ಪೂಜಾರಿ ಅವರು ಕಣದಲ್ಲಿದ್ದು, ಎರಡೂ ಪಕ್ಷಗಳ ಪ್ರಮುಖರು ಕೂಡ ಮತಗಟ್ಟೆಯ ಹೊರಭಾಗದಲ್ಲಿ ನಿಂತು ತಮ್ಮ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ವಿನಂತಿ ಮಾಡುತ್ತಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here