ಬಂಟ್ವಾಳ : ಡಿ.8 ರಂದು ಬಿಸಿರೋಡಿನ ಸ್ಪರ್ಶಾ ಕಲಾಮಂದಿರ ದಲ್ಲಿ ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಂಘಗಳ ಹಾಗೂ ಯುವವಾಹಿನಿ (ರಿ). ಬಂಟ್ವಾಳ ಮತ್ತು ಮಾಣಿ ಘಟಕ ಸಹಯೋಗದೊಂದಿಗೆ ನಡೆಯಲಿರುವ “ನಮ್ಮ ಬಿರುವೆರ್ “ ಐಕ್ಯತಾ ಸಮಾವೇಶ 2019 ಎಂಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಜೀಪ ಬ್ರಹ್ಮ ಶ್ರೀ ನಾರಾಯಣ ಸಭಾ ಭವನದಲ್ಲಿ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ ಗರುಗಳಾದ ಎ.ರುಕ್ಮಯ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಸಂಜೀವ ಪೂಜಾರಿ ಜಂಟಿಯಾಗಿ ಅಮಂತ್ರಣ ಪತ್ರಿಕೆ ಯ ಬಿಡುಗಡೆ ಮಾಡಿದರು.
ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಶಾಸಕ ರುಕ್ಮಯ ಪೂಜಾರಿ , ಬಿಲ್ಲವರು ಈ ಜಿಲ್ಲೆಯ ಮೂಲನಿವಾಸಿಗಳು, ಅದರೂ ನಿರೀಕ್ಷಿತ ಸ್ಥಾನಮಾನ ಸಿಗಲಿಲ್ಲ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.
ಅನಿಟ್ಟಿನಲ್ಲಿ ಬಲಿಷ್ಠ ಸಂಘಟನೆಯ ಅವಶ್ಯ ಕತೆ ಇದೆ. ಐಕ್ಯತಾ ಸಮಾವೇಶದ ಮೂಲಕ ಸಮಾಜದ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ . ಈ ಕಾರ್ಯಕ್ರಮದ ಲ್ಲಿ ಪ್ರತಿಯೊಬ್ಬರು ಒಂದೇ ಮನಸ್ಸಿನಿಂದ ಭಾಗವಹಸಿ , ಯಶಸ್ವಿಗೊಳಿಸಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ 1000ಸಾವಿರ ಜನ ಸೇರುವ ನಿರೀಕ್ಷೆ ಅನಿಟ್ಟಿನಲ್ಲಿ ಕಾರ್ಯಕ್ರಮ ಗಳನ್ನು ಎಂದು ಅವರು ಹೇಳಿದರು.
ಸಮಾಜದ ಸ್ವಾಭಿಮಾನ ಗೌರವ ಸ್ಥಾನಮಾನವನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಬಿಲ್ಲವರು ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಸಮಯಕ್ಕೆ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಮಾಜದ ಗಣ್ಯರನ್ನು ಅಭಿನಂದನೆ ಸಲ್ಲಿಸಲಿದೆ ಎಂದರು. ಸಂಜೀವ ಪೂಜಾರಿ ಮಾತನಾಡಿ
ಸಮಾಜದ ಬಾಂಧವರು ಜೊತೆಯಾಗಿ ಭಾಗವಹಿಸಿ ಸಾಮೂಹಿಕ ನಾಯಕತ್ವದಿಂದ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.
ಯಶವಂತ ದೇರಾಜೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಒಗ್ಗಟ್ಟಿನಿಂದ ಮಾತ್ರ ಸಮಾಜ ಶಕ್ತಿಯುತವಾಗಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು. ನಮ್ಮ ಶಕ್ತಿಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದು ಅವರು ಹೇಳಿದರು. ರಾಜಕೀಯ ರಹಿತ ಕಾರ್ಯಕ್ರಮ ಮಾಡುವ ಮೂಲಕ ಇತರರಿಗೆ ಮಾದರಿ ಕಾರ್ಯಕ್ರಮ ಆಯೋಜನೆ ಮಾಡಲು ಯೋಜನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಉಪಾಧ್ಯಕ್ಷರುಗಳಾದ ಜಯಂತಿ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ರಾಜೇಶ್ ಬಾಳೆಕಲ್ಲು, ಕಾರ್ಯದರ್ಶಿ ಜಗದೀಶ್ ಕೊಯಿಲ, ಸಮಿತಿ ಹಾಗೂ ವಿವಿಧ ವಲಯದ ಪ್ರಮುಖರಾದ ಯಶವಂತ ಪೊಳಲಿ, ಬೇಬಿಕುಂದರ್, ಮೋನಪ್ಪ ದೇವಸ್ಯ, ಪುರುಷ ಸಾಲಿಯಾನ್ ನತ್ರಕೆರೆ, ವೆಂಕಪ್ಪ ಪೂಜಾರಿ, ವೆಂಕಪ್ಪ ಪೂಜಾರಿ, ಇಂದ್ರೇಶ್, ಸತೀಶ್ ಪೂಜಾರಿ , ಶ್ರೀದರ ಅಮೀನ್, ಅನಂದ ಸಾಲಿಯಾನ್, ಶಾರದಾ ಎಮ್, ಪ್ರೇಮನಾಥ ಕೆ, ಸುಂದರ ಪೂಜಾರಿ ಬೋಳಂಗಡಿ, ಲೋಕೇಶ್ ಪೂಜಾರಿ, ಜಯಶಂಕರ್ ಕಾನ್ಸಾಲೆ, ರಮೇಶ್ ಮುಜಲ, ರೋಶನ್ ಅಮೀನ್, ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ, ರಮೇಶ್ ಹೊಸಕಟ್ಟ, ಗಣೇಶ್ ಪೂಜಾರಿ ಪೂಂಜರಕೋಡಿ, ಪ್ರವೀಣ್ ಪೂಜಾರಿ, ಸೀತಾರಾಮ್ ಶಾಂತಿ, ಕೊರಗಪ್ಪ ಪೂಜಾರಿ ಕೊಯಿಲ, ಸುಂದರ ಪೂಜಾರಿ ಬೋಳಿಯಾರ್,ಭವಾನಿ ಎನ್ ಅಮೀನ್, ಸುಜಾತಮೋಹನ್ ದಾಸ್ ಪೂಜಾರಿ ಬೊಳ್ಳಾಯಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರದಂದು ಬೆಳಿಗ್ಗೆ 8.30 ಕ್ಕೆ ಬಿಸಿರೋಡಿನ ನಾರಾಯಣಗುರು ಮಂದಿರದಲ್ಲಿ ಗುರುಪೂಜೆ, ಸ್ಪರ್ಶ ಕಲಾಮಂದಿರದವರೆಗೆ ಚೆಂಡೆ ವಾದ್ಯದೊಂದಿಗೆ ಸ್ವಾಮೀಜಿಗಳಿಗೆ ಮತ್ತು ಅತಿಥಿ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ.
ವಿಶೇಷ ಅಕರ್ಷಣೆಯಾಗಿ ಚಿತ್ರ ನಟ ನಟಿಯರು, ಯಕ್ಷಗಾನ ಕಲಾವಿದರು , ಬಾಲನಟಿಯರು ಭಾಗಹಿಸುವರು.
ಮಧ್ಯಾಹ್ನ 2 ಗಂಟೆಯಿಂದ “ನಾರಾಯಣಗುರು” ತುಳು ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಜಗದೀಶ್ ಕೊಯಿಲ ಸ್ವಾಗತಿಸಿ, ಲೋಕೇಶ್ ಸುವರ್ಣ ಅಲೆತ್ತೂರು ವಂದಿಸಿದರು.
ಶ್ರೀದರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.