ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ನಾಯಕ ಲೋಹಿತ್ ಪಣೋಲಿಬೈಲ್ ಮತ್ತು ಸಾಮಾಜಿಕ ಸೇವಾಕಾರ್ಯಕರ್ತ ರವಿಚಂದ್ರ ನಾಯ್ಕ್ ನಗ್ರಿ ಇವರ ಮುಂದಾಳತ್ವದಲ್ಲಿ ಸಹೃದಯಿ ದಾನಿಗಳ ಸಹಕಾರ ಮತ್ತು ಉತ್ಸಾಹಿ ಯುವಕರ ಪರಿಶ್ರಮದಿಂದ ಮೀನಾಕ್ಷಿ ಗೋವಿಂದ ಕುಲಾಲ್ ನಗ್ರಿ ಇವರಿಗೆ ಸುಮಾರು 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ   ” ಕಾಮಧೇನು ನಿಲಯ” ಮನೆಯನ್ನು, ನಾಳೆ ಡಿ.1 ರಂದು ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ಮಾಡಿ ಸಜ್ಜನ ಬಂಧುಗಳ ಸಮ್ಮುಖದಲ್ಲಿ ಹಸ್ತಾಂತರಿಸುವ ಶುಭ ಸಮಾರಂಭ ನಡೆಯಲಿದೆ.

ಸಮಾಜಮುಖಿ ಚಿಂತನೆಯ ಈ ಮಹತ್ಕಾರ್ಯದಲ್ಲಿ ಬಂಟ್ವಾಳ ಕುಲಾಲ ಯುವ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಸಜಿಪ ಜನಸೇವಾ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಬಂಟ್ವಾಳ, ಕುಲಾಲ ಕುಂಬಾರರ ವೇದಿಕೆ ಪನೋಲಿಬೈಲ್, ಸಜಿಪ ಪ್ರೀಮಿಯರ್ ಲೀಗ್ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶ್ರೀ ಶಾರದಾ ಮಂದಿರ ನಗ್ರಿ, ವಿಶ್ವಹಿಂದು ಪರಿಷತ್ ಬಜರಂಗದಳ ಹನುಮಾನ್ ಶಾಖೆ ಸಜಿಪಮೂಡ ಬೊಳ್ಳಾಯಿ, ಶ್ರೀಕರ ಸ್ವಸಹಾಯ ಸಂಘ ಬೇಂಕ್ಯ, ಸೇವಾ ಸಂಘ ಮಂಗಳೂರು, ಸ್ನೇಹಮಿಲನ ಕಲ್ಲಡ್ಕ , ವಿದ್ಯಾದಾಯಿನಿ ಸ್ವಸಹಾಯ ಸಂಘ ನಗ್ರಿ ಸಜಿಪಮೂಡ ಹಾಗೂ ಊರ ಪರವೂರ ಹಲವಾರು ಸಹೃದಯಿ ದಾನಿಗಳು ನಿಸ್ವಾರ್ಥವಾಗಿ ತನು ಮನ ಧನ ಮತ್ತು ಶ್ರಮದಾನದ ಮೂಲಕ ಸಹಕಾರ ನೀಡಿರುತ್ತಾರೆ..

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here