Tuesday, April 9, 2024

ಕುಂಡಡ್ಕ: ಎನ್ನೆಸೆಸ್ ಶಿಬಿರ ಉದ್ಘಾಟನೆ

ವಿಟ್ಲ: ಕಲ್ಲಡ್ಕ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುಂಡಡ್ಕ ಪಿಲಿಪ್ಪೆ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟನೆಯನ್ನು ಇಡ್ಕಿದು ಗ್ರಾಮ ಪಂಚಾಯಿತಿ ಪಿಡಿಒ ಗೋಕುಲದಾಸ್ ಭಕ್ತ ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ಜೀವನದ ಅನುಭವಗಳನ್ನು ಅರಿಯುವುದಕ್ಕೆ ಸಹಕಾರಿಯಾಗಿದೆ ಎಂದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಮಂಜುನಾಥ್ ಸಿ.ಕೆ ಮಾತನಾಡಿ ಪುಸ್ತಕಗಳಿಂದ ಲಭಿಸುವ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಮುಖ್ಯ ಎಂದರು. ಇಂದು ನಾವು ಎದುರಿಸುವ ಹಲವಾರು ಪ್ರಾಕೃತಿಕ ಸಮಸ್ಯೆಗಳಿಗೆ ಇಂತಹ ಶಿಬಿರಗಳ ಮುಖಾಂತರ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ರಾಷ್ಟ್ರೀಯತೆಯ ಭಾವನೆಗಳನ್ನು ಯುವ ಮನಸ್ಸಿನಲ್ಲಿ ಮೂಡಿಸುವುದರ ಜೊತೆಗೆ ರಾಷ್ಟ್ರಕ್ಕಾಗಿ ಮಿಡಿಯುವ ಹಾಗೂ ತುಡಿಯುವ ಮನಸ್ಸನ್ನು ನಿರ್ಮಾಣ ಮಾಡುತ್ತದೆ. ಡಾ.ಅಬ್ದುಲ್ ಕಲಾಂ, ರಾಧಾಕೃಷ್ಣನ್, ಉಪೇಂದ್ರ ಮೊದಲಾದ ಹಲವಾರು ವ್ಯಕ್ತಿಗಳು ಇಂತಹ ಶಿಬಿರಗಳಿಂದ ಪ್ರಭಾವಿತರಾಗಿದ್ದಾರೆ ಎಂದರು.
ಶ್ರಮದಾನದ ಉದ್ಘಾಟನೆಯನ್ನು ವಿಟ್ಲ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಸೀಮೆಯ ಗುರಿಕಾರ ಕೆ.ಟಿ ವೆಂಕಟೇಶ್ವರ ಭಟ್ ನೂಜಿ, ವಿಟ್ಲ ಸೇವಾ ಸಹಕಾರಿ ಸಂಘ ಇದರ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ವಕೀಲರಾದ ಗೊವಿಂದರಾಜ್ ಪೆರುವಾಜೆ, ವಿಟ್ಲಮುಡ್ನೂರು ಗ್ರಾಮ ಸಮೃದ್ಧಿ ಸಮಿತಿ ಕಾರ್ಯದರ್ಶಿ ಯತೀಶ್ ಹಡೀಲು, ಅಳಿಕೆ ಪಂಚಾಯಿತಿ ಪಿಡಿಒ ಜಿನ್ನಪ್ಪ ಗಾಳಿಗುಡ್ಡೆ, ಕಾಲೇಜಿನ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪೂರ್ಣಶ್ರೀ, ಕಾಲೇಜಿನ ಪ್ರಿನ್ಸಿಪಾಲ್, ಕ್ರಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ೫೬ ಶಿಬಿರಾರ್ಥಿಗಳು ಪಾಲ್ಗೊಂಡರು. ಯೋಜನಾಧಿಕಾರಿ ಹರೀಶ್ ಸ್ವಾಗತಿಸಿದರು. ಉಪನ್ಯಾಸಕ ಸಚಿನ್ ಜೈನ್ ಹಳೆಯೂರು ವಂದಿಸಿದರು. ಉಪನ್ಯಾಸಕಿ ಲತಾಶ್ರೀ ನಿರೂಪಿಸಿದರು.

More from the blog

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ದ್ವಿತೀಯ ಪಿಯುಸಿ ಫಲಿತಾಂಶ ಶೀಘ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟಗೊಂಡ ನಂತರ, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು...

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ...