ವಿಟ್ಲ: ಕಲ್ಲಡ್ಕ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುಂಡಡ್ಕ ಪಿಲಿಪ್ಪೆ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟನೆಯನ್ನು ಇಡ್ಕಿದು ಗ್ರಾಮ ಪಂಚಾಯಿತಿ ಪಿಡಿಒ ಗೋಕುಲದಾಸ್ ಭಕ್ತ ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ಜೀವನದ ಅನುಭವಗಳನ್ನು ಅರಿಯುವುದಕ್ಕೆ ಸಹಕಾರಿಯಾಗಿದೆ ಎಂದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಮಂಜುನಾಥ್ ಸಿ.ಕೆ ಮಾತನಾಡಿ ಪುಸ್ತಕಗಳಿಂದ ಲಭಿಸುವ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಮುಖ್ಯ ಎಂದರು. ಇಂದು ನಾವು ಎದುರಿಸುವ ಹಲವಾರು ಪ್ರಾಕೃತಿಕ ಸಮಸ್ಯೆಗಳಿಗೆ ಇಂತಹ ಶಿಬಿರಗಳ ಮುಖಾಂತರ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ರಾಷ್ಟ್ರೀಯತೆಯ ಭಾವನೆಗಳನ್ನು ಯುವ ಮನಸ್ಸಿನಲ್ಲಿ ಮೂಡಿಸುವುದರ ಜೊತೆಗೆ ರಾಷ್ಟ್ರಕ್ಕಾಗಿ ಮಿಡಿಯುವ ಹಾಗೂ ತುಡಿಯುವ ಮನಸ್ಸನ್ನು ನಿರ್ಮಾಣ ಮಾಡುತ್ತದೆ. ಅಂತೆಯೇ ಡಾ.ಅಬ್ದುಲ್ ಕಲಾಂ, ರಾಧಾಕೃಷ್ಣನ್, ಉಪೇಂದ್ರ ಮೊದಲಾದ ಹಲವಾರು ವ್ಯಕ್ತಿಗಳು ಇಂತಹ ಶಿಬಿರಗಳಿಂದ ಪ್ರಭಾವಿತರಾಗಿದ್ದಾರೆ ಎಂದರು.
ಶ್ರಮದಾನದ ಉದ್ಘಾಟನೆಯನ್ನು ವಿಟ್ಲ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಸೀಮೆಯ ಗುರಿಕಾರ ಕೆ ಟಿ ವೆಂಕಟೇಶ್ವರ ಭಟ್ ನೂಜಿ ವೇದಿಕೆಯಲ್ಲಿ ವಿಟ್ಲ ಸೇವಾ ಸಹಕಾರಿ ಸಂಘ ಇದರ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,
ವಕೀಲರಾದ ಗೊವಿಂದರಾಜ್ ಪೆರುವಾಜೆ, ವಿಟ್ಲ ಮುಡ್ನೂರು ಗ್ರಾಮ ಸಮೃದ್ಧಿ ಸಮಿತಿ ಇದರ ಕಾರ್ಯದರ್ಶಿ ಯತೀಶ್ ಹಡೀಲು, ಅಳಿಕೆ ಪಂಚಾಯಿತಿ ಪಿಡಿಒ ಜಿನ್ನಪ್ಪ ಗಾಳಿಗುಡ್ಡೆ, ಕಾಲೇಜಿನ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪೂರ್ಣಶ್ರೀ, ಕಾಲೇಜಿನ ಪ್ರಿನ್ಸಿಪಾಲ್, ಕ್ರಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 56 ಶಿಬಿರಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮವನ್ನು ಯೋಜನಾಧಿಕಾರಿ ಹರೀಶ್ ಸ್ವಾಗತಿಸಿದರು. ಉಪನ್ಯಾಸಕರಾದ ಸಚಿನ್ ಜೈನ್ ಹಳೆಯೂರು ವಂದಿಸಿದರು. ಉಪನ್ಯಾಸಕಿ ಲತಾಶ್ರೀ ನಿರೂಪಿಸಿದರು.