ಬಂಟ್ವಾಳ: ತೋಟಗಾರಿಕಾ ಇಲಾಖೆ ಬಂಟ್ವಾಳ ಇದರ ಆಶ್ರಯ ದಲ್ಲಿ ಹಾಗೂ ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವ(ನಿ.) ಇದರ ಸಹಯೋಗದೊಂದಿಗೆ 2019-20 ನೇ ಸಾಲಿನ ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಜೇನು ಕೃಷಿ ಕಾರ್ಯಗಾರ ಬಿಸಿರೋಡಿನ ಎಸ್.ಜಿ.ವೈ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಔಷಧೀಯ ಮಹತ್ವದ ಗುಣಗಳಿರುವ, ಜೇನು ಕೃಷಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಇದೆ, ಹಾಗಾಗಿ
ಹೊಸ ಮಾದರಿಯ ಜೇನು ವ್ಯವಸಾಯದಲ್ಲಿ ಕೃಷಿಕರು ತೊಡಗಿಸಿಕೊಂಡು ಇಳುವರಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಹೊಸ ತಂತ್ರಜ್ಞಾನ ವನ್ನು ತೋಟಗಾರಿಕಾ ಇಲಾಖೆಯವರು ಸಾಮಾನ್ಯ ರೈತರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ರೈತರಿಗೆ ಸಹಾಯಧನದ ಜೊತೆಜೊತೆಯಾಗಿ, ವಿದೇಶಿ ಮಾದರಿಯಲ್ಲಿ ಅತ್ಯಂತ ಅಧುನಿಕ ತಂತ್ರಜ್ಞಾನ ಗಳ ಮೂಲಕ ಕೃಷಿ ಮಾಡುವ ಬಗ್ಗೆ ತರಬೇತಿ ಪಡೆದು ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿ ರೈತರು ಜೇನು ವ್ಯವಸಾಯ ಮಾಡಿದಾಗ ಪರಾಗಸ್ಪರ್ಶದಿಂದ ಇತರ ಮಿಶ್ರಕೃಷಿಯಲ್ಲಿ ಅತ್ಯಂತ ಉತ್ತಮ ಇಳುವರಿಯನ್ನು ಪಡೆಯಬಹುದು. ನೈಸರ್ಗಿಕ ಸಂಪನ್ಮೂಲಗಳ ಬಳಸಿ ಜೇನು ಕೃಷಿ ವ್ಯವಸಾಯದಲ್ಲಿ ಲಾಭಾಂಶ ಪಡೆಯಬಹುದು. ದೊಡ್ಡ ರೈತರು ಜೇನು ಕೃಷಿಯ ಮೂಲಕ ಜೇನು ಉತ್ಪಾದನೆ ಹೆಚ್ಚು ಮಾಡಿದಾಗ
ಕೆ.ಎಂ.ಎಪ್ ಮೂಲಕ ಮಾರುಕಟ್ಟೆಯ ನ್ನು ಮಾಡಲು ಸಾಧ್ಯವಾಗುತ್ತದೆ. ಜೇನು ಕೃಷಿಕೆ ಉತ್ತಮ ಮಾರುಕಟ್ಟೆ ಇರುವುದರಿಂದ ಗುಣಮಟ್ಟದ ಜೇನು ವ್ಯವಸಾಯ ಮಾಡಲು ಅವರು ಕೃಷಿಕರಿಗೆ ತಿಳಿಸಿದರು.
ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ,
ದ.ಕ.ಜಿಲ್ಲೆಯಲ್ಲಿ ಮೂಲ ಕೃಷಿಯ ಜೊತೆ ಮಿಶ್ರ ಬೆಳೆ ಬೆಳೆದಾಗ ಮಾತ್ರ ಕೃಷಿಯಲ್ಲಿ ಆರ್ಥಿಕ ವಾಗಿ ಸದೃಡರಾಗಲು ಸಾಧ್ಯ ಎಂದು ಚಂದ್ರಹಾಸ ಕರ್ಕೇರ ಹೇಳಿದರು.
ಕೃಷಿ ಪ್ರಧಾನವಾಗಿ ರುವ ಜಿಲ್ಲೆಯಲ್ಲಿ ಹೊಸ ಯಾಂತ್ರೀಕೃತ ಮಾದರಿಯ ಕೃಷಿಯ ಮಾಹಿತಿಯ ಕೊರತೆ ಇದೆ.
ಸರಕಾರ ಇಂತಹ ಯೋಜನೆಗಳ ಮೂಲಕ ಮಾಹಿತಿ ನೀಡಿದಾಗ ಕೃಷಿಯಲ್ಲಿ ಮಹತ್ತರವಾದ ಸಾಧನೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಸರಕಾರದ ಯೋಜನೆಗಳ ಮಾಹಿತಿ ಗಳು ಸರಿಯಾದ ರೀತಿಯಲ್ಲಿ ಕೃಷಿಕರಿಗೆ ತಲುಪಿದಾಗ ಮಾತ್ರ ಕೃಷಿಯಲ್ಲಿ ಬದಲಾವಣೆ ಸಾಧ್ಯ, ಹೊಸ ಮಾದರಿಯಲ್ಲಿ ಲಾಭದಾಯಕ ಕೃಷಿಯ ಮೂಲಕ ಯಶಸ್ಸು ಗಳಿಸಲು ಸಾಧ್ಯವಾಗಬಹುದು ಎಂದು ಅವರು ಹೇಳಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಜೇನು ಕೃಷಿ ಅನೇಕ ರೈತರಿಗೆ ಜೀವನಾಧಾರ ಅಗಿದೆ. ಕೃಷಿಕರ ಅರ್ಥಿಕ ವ್ಯವಸ್ಥೆಯಲ್ಲಿ ಪ್ರಧಾನ ಕೃಷಿಯಾಗಿರುವ ಜೇನು ಕೃಷಿಗೆ ಸರಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ವ್ಯವಸಾಯ ಮಾಡುವ ಕೃಷಿಕರು ಇದರ ಪ್ರಯೋಜನ ಪಡೆಯುವಂತೆ ಅವರು ತಿಳಿಸಿದರು.
ತಾ.ಪಂ.ಇ.ಒ.ರಾಜಣ್ಣ ಕಾರ್ಯಕ್ರಮ ಕ್ಕೆ ಶುಭಹಾರೈಸಿದ ಅವರು ತಾ.ಪಂ.ಅನುದಾನವನ್ನು ಬಳಸಿಕೊಂಡು ಜೇನು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಗಳನ್ನು ನಡೆಸಿದರೆ ಉತ್ತಮ ಎಂದು ಹೇಳಿದರು.
ಜೇನು ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷ ಸತೀಶ್ಚಂದ್ರ ಅವರು ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ತಾ.ಪಂ.ಸದಸ್ಯ ರಾದ ಮಂಜುಳಾಕುಶಲ ಮಂಜೊಟ್ಟಿ, ಶೋಭಾ ರೈ ಉಪಸ್ಥಿತರಿದ್ದರು.
ತೋಟಗಾರಿಕಾ ಉಪನಿರ್ದೇಶಕ ಎಚ್.ಆರ್ .ನಾಯಕ್, ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು.
ಜೇನು ಸೊಸೈಟಿ ನಿರ್ದೇಶಕ
ಮೋಹನ್ ಪಿ.ಎಸ್.ಸ್ವಾಗತಿಸಿದರು.ಬಂಟ್ವಾಳ ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.
ಜೇನು ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ
ಪ್ರಭಾಕರ ಶೆಟ್ಟಿ, ಜಯಪ್ರಕಾಶ್ , ಹರೀಶ್ ಕುಡ್ಲ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.