ಕೈಕಂಬ: ಮುಜರಾಯಿ ಇಲಾಖೆಗ ಸೇರಿದ ದೇವಸ್ಥಾನಗಳ ಆದಾಯದಿಂದ ದೇವಸ್ಥಾನಗಳ ಅಭಿವೃದ್ಧಿಯನ್ನು ಇಲ್ಲಿಯ ಶಾಸಕರ ಹಾಗೂ ಜನರ ಸಹಕಾರದೊಂದಿಗೆ ಮಾಡುವದಾಗಿ ಚಿಂತನೆ ಮಾಡಲಾಗಿದೆ. ಅಲ್ಲದೆ ವೈನ್‍ಶಾಪ್ ಬಾರ್‍ಎಂಡ್ ರೆಸ್ಟೋರೆಂಟ್‍ಗೆ ದೇವರ ನಾಮದ ಹೆಸರನ್ನು ಇಡುವ ಬಗ್ಗೆ ರಾಜ್ಯದ ಮುಖಂಡರೊಂದಿಗೆ ಚರ್ಚೆ ನಡೆಸಿ ಅದರ ಬಗ್ಗೆ ಆದೇಶ ನೀಡಲಾಗುವುದು ಎಂದು ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು .

 ಇಲ್ಲಿಯ ಜನರ ಮನವಿ ಮೇರೆಗೆ ದೇವಸ್ಥಾನದ ರಥಬೀದಿಗೆ ಕಾಕ್ರೀಟಿಕರಣಗೊಳಿಸಲಾಗುವುದು ಹಾಗೂ ಇನ್ನಿತರ ಅಗತ್ಯವಾದ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು ಎಂದು ಹೇಳಿದರು. ಅವರು ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಮೂಲ ದೇವಸ್ಥಾನಕ್ಕೆ ಹೋಗುವ ಮೆಟ್ಟಲಿನ ಶಿಲಾನ್ಯಾಸ ಕಾರ್ಯಕ್ರಮವನ್ನು ನ.11ರಂದು ಸೋಮವಾರ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಬಡಗ ಬೆಳ್ಳೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ, ದೇವಳದ ಅರ್ಚಕ ಪ್ರಕಾಶ್ ಭಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ ಸದಸ್ಯರಾದ ಬಾರಿ ಭಂಡಾರಿ, ಕಿಶೋರ್ ಭಂಡಾರಿ, ಸವಿತ ಎನ್ ಶೆಟ್ಟಿ, ವೀಣಾ ಭಟ್ ಹಾಗೂ ಚಂದ್ರಶೇಖರ ಅಜಿಲ, ಅನಂತರಾಮ್ ಹೇರಳ, ದೇವಪ್ಪ ಪೂಜಾರಿ, ಮಹಬಲ ಆಳ್ವ,ನಂದರಾಮ್ ರೈ, ಉಮೇಶ್ ಶೆಟ್ಟಿ ಪರಿಮೊಗರು,ಜಯರಾಮ ಶೆಟ್ಟಿ, ರಮೇಶ್ ಬಟ್ಟಾಜೆ , ವಿಠಲ   ಮತ್ತಿತರರು ಉಪಸ್ಥಿತರಿದ್ದರು. ರಘು ಎಲ್ ಶೆಟ್ಟಿ ಸ್ವಾಗತಿಸಿ,ಸವಿತಾ ಎನ್ ಶೆಟ್ಟಿ ವಂದಿಸಿದರು. ದಿನೇಶ ವರಕೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here