ಬಂಟ್ವಾಳ: ಅಪ್ರಾತ್ತ ಶಾಲಾ ಬಾಲಕಿಯೋರ್ವಳಿಗೆ ಕಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತ್ರತ್ವದ ತಂಡ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಕಲ್ಲಡ್ಕ ದಲ್ಲಿ ನಡೆದಿದೆ.
ಕಲ್ಲಡ್ಕ ಸಮೀಪದ ಬೊಳಂತೂರು ನಿವಾಸಿ ರಿಕ್ಷಾ ಚಾಲಕ ರಹೀಂ ಆರೋಪಿಯಾಗಿದ್ದು ಪೋಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಕಲ್ಲಡ್ಕ ಸಮೀಪದ ಅಪ್ರಾತ್ತ ಶಾಲಾ ಬಾಲಕಿಗೆ ಅನ್ಯಕೋಮಿನ ಯುವಕನೋರ್ವ ಮುತ್ತು ನೀಡಿದ ಘಟನೆ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ವರಾಂಡದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಶಾಲಾ ಬಾಲಕಿ ತನ್ನ ಸ್ನೇಹಿತ ಗಾಗಿ ಪಂಚವಟಿ ವಾಣಿಜ್ಯ ಸಂಕೀರ್ಣದ ವರಾಂಡದಲ್ಲಿ ತನ್ನ ಸ್ನೇಹಿತೆಯ ಜೊತೆ ಶಾಲೆಗೆ ಹೋಗಲು ಕಾದು ಕುಳಿತಿದ್ದಳು. ಅದೇ ಸಮಯದಲ್ಲಿ ಇವಳು ಒಬ್ಬಳೇ ನಿಂತುಕೊಂಡಿರುವುದನ್ನು ನೋಡಿದ ರಿಕ್ಷಾ ಚಾಲಕ ರಹೀಂ ಬಾಲಕಿಯ ಬಳಿಕ ಬಂದು ಅವಳನ್ನು ತಬ್ಬಿಹಿಡಿದು ಮುತ್ತು ನೀಡಿದ್ದ. ಈತ ತಬ್ಬಿಕೊಂಡು ಮುತ್ತು ನೀಡುವಾಗ ಬಾಲಕಿ ಬೊಬ್ಬೆ ಹಾಕಿದ್ದು, ಸ್ಥಳೀಯರು ಅಗಮಿಸುವ ವೇಳೆ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಘಟನೆಯಿಂದ ಕೋಮುಸೂಕ್ಮ ಪ್ರದೇಶ ಕಲ್ಲಡ್ಕ ಕೆಲಹೊತ್ತು ಅಶಾಂತಿಯತ್ತ ಹೋಗುತ್ತದೆ ಎಂಬುದನ್ನು ಅರಿತ ಪೋಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನವೇ ಕ್ಪಿಪ್ರಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಕ್ಕಾಗಿ ಪೋಲೀಸರು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಅವರ ಮಾರ್ಗದರ್ಶನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಪ್ರೋ.ಎಸ್.ಐ.ಕುಮಾರ್, ಎ.ಎಸ್.ಐ.ಜಯರಾಮ್ ಹಾಗೂ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.