ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಬಲಿಷ್ಠ ಹಿಂದೂ ಸಮಾಜ ಸತ್ ಸಂಕಲ್ಪದಲ್ಲಿ ಕೈ ಜೋಡಿಸುವ ಹಿತಚಿಂತಕ ಅಭಿಯಾನಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿದೇವಸ್ಥಾನದ ಸನ್ನಿಧಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಹಿತಚಿಂತಕ 2019 ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ,ಬಲಿಷ್ಠ ಹಿಂದೂ ಸಮಾಜವನ್ನು ಕಟ್ಟುವ ದೆಸೆಯಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕೆ ಹಿಂದೂ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ರಕ್ತೇಶ್ವರೀ ದೇವಳದ ಟ್ರಸ್ಟಿ ಬಿ.ಮೋಹನ್,ವಿಹಿಂಪನ ಜಿಲ್ಲಾ ಪ್ರಮುಖ ಸರಪಾಡಿ ಆಶೋಕ ಶೆಟ್ಟಿ,ಭಜರಂಗದಳದ ಪ್ರಮುಖರಾದ ಗುರುರಾಜ್ ಬಂಟ್ವಾಳ,ಅಕೇಶ್ ಬೆಂಜನಪದವು,ಸುರೇಶ್ ಬೆಂಜನಪದವು,ಸಂತೋಷ್ ನೇಲ್ಯಪಲ್ಕೆ,ಆಶ್ವಥ್ ಪುಂಜಾಲಕಟ್ಟೆ ಮಾದಲಾದವರಿದ್ದರು.