Wednesday, October 18, 2023

ದ್ವಿಚಕ್ರ ವಾಹನಕ್ಕೆ ಮುಳ್ಳು ಹಂದಿ ಡಿಕ್ಕಿ ಹಿಂಬದಿ ಸವಾರನ ಕಾಲಿಗೆ ತೀವ್ರ ಗಾಯ.

Must read

ಕೇಪು- ನಿನ್ನೆ ರಾತ್ರಿ ಪುನಚ ಕಡೆಯಿಂದ ವಿಟ್ಲ ಕಡೆಗೆ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ, ಸವಾರರು ಕೇಪು – ಕುಕ್ಕೆಬೆಟ್ಟು ಮಸೀದಿ ಬಳಿ ತಲುಪಿದಾಗ ಮುಳ್ಳು ಹಂದಿ ಏಕಾಏಕಿ ಅಡ್ಡ ಬಂದ ಪರಿಣಾಮ ಹಂದಿಯ ದೇಹವು ಹಿಂಬದಿ ಸವಾರನ ಎಡ ಕಾಲನ್ನು ಸವರಿ ಕ್ಷಣಾರ್ಧದಲ್ಲಿ ಮಾಯವಾಗಿದೆ.
ಈ ಸಂಧರ್ಭದಲ್ಲಿ ತನ್ನ ರಕ್ಷಣೆಯ ಉದ್ದೇಶದಿಂದ, ಮುಳ್ಳು ಹಂದಿಯು ದೇಹದ ಮುಳ್ಳನ್ನು ಬೇರ್ಪಡಿಸಿ ತನ್ನ ಸಿಟ್ಟನ್ನು ತೋರ್ಪಡಿಸಿದ ಪರಿಣಾಮ, ಅದರ ಕೆಲವು ಮುಳ್ಳುಗಳು ಹಿಂಬದಿ ಸವಾರ ಧರಿಸಿದ ಗುಣಮಟ್ಟದ ಚಪ್ಪಲಿನ ಅಡಿಯ ಭಾಗದಿಂದ ಪ್ರವೇಶಿಸಿ ಸರಿಸುಮಾರು ನಾಲ್ಕು ಇಂಚಿನಷ್ಟು ಕಾಲಿನ ಒಳಗೆ ಸೇರಿದೆ. ಇದರ ಪರಿಣಾಮ, ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಯಿತು. ತಕ್ಷಣವೇ ಸ್ಥಳೀಯರು ಸೇರಿ ಪ್ರಸ್ತುತ ಸವಾರರ ನೆರವಿಗೆ ಧಾವಿಸಿದರು.. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸವಾರರು ವಿಟ್ಲಕ್ಕೆ ತೆರಳಿ ವೈದ್ಯರಿಂದ ಪರೀಕ್ಷೆ ನಡೆಸಿ ಮನೆ ಸೇರಿದರು.

ಕೇಪು, ಪ್ರಸ್ತುತ ಪರದೇಶದಲ್ಲಿ ಕಾಡುಹಂದಿ, ಹೆಬ್ಬಾವು ಮುಳ್ಲು ಹಂದಿಯ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಪ್ರತ್ಯೇಕವಾಗಿ ದ್ವಿಚಕ್ರ ಸವಾರರು ನಿದಾನವಾಗಿ ಹಾಗೂ ಎಚ್ಚರಿಕೆಯಿಂದ ಚಲಿಸುವ ಮೂಲಕ ಇಲ್ಲಿ ಸಂಭವಿಸುವ ಹೆಚ್ಚಿನ ಅನಾಹುತದಿಂದ ತಪ್ಪಿಸಬಹುದಾಗಿದೆ.

.

More articles

Latest article