ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಸೋಮವಾರದಿಂದ ಮೂರುದಿನಗಳ ಕಾಲಆಯೋಜಿಸಿರುವ ಗಾಂಧೀಜಿ ಯವರ ಜೀವನ ಚರಿತ್ರೆ ತಿಳಿಸುವ ಛಾಯಾಚಿತ್ರ ಪ್ರದರ್ಶನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ವೀಕ್ಷಿಸಿದರು.

ಬಳಿಕ ಮಾತನಾಡಿದ ಶಾಸಕರು ಛಾಯಾಚಿತ್ರವನ್ನು ವೀಕ್ಷಿಸಿ ಮಾತನಾಡಿ, ಗಾಂಧೀಜಿ ಅವರ ಬದುಕಿನ ಸಮಗ್ರ  ಮಾಹಿತಿಗಳನ್ನೊಳಗೊಂಡ ಅಪರೂಪದ  ಛಾಯಾಚಿತ್ರಗಳು ಇಲ್ಲಿದ್ದು. ಇವುಗಳನ್ನು  ವೀಕ್ಷಿಸಿ ಅವರ ಬದುಕಿನ ಸಾಧನೆಗಳ ಪರಿಚಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ  ಕಲ್ಪಿಸಿರುವುವುದು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದ್ದು,ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿ ಗಳು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.  ಶಾಸಕ ರಾಜೇಶ್ ನಾಯ್ಕ್ ಅವರ  ಭೇಟಿಯ ವೇಳೆ  ತಹಸೀಲ್ದಾರ್ ರಶ್ಮಿ ಎಸ್. ಆರ್. , ತಾಪಂ ಸದಸ್ಯ ಪ್ರಭಾಕರ ಪ್ರಭು, ರಾಯಿ ಪಂ.ಸದಸ್ಯ ಹರೀಶ್ ಆಚಾರ್ಯ,ಪುರುಷೋತ್ತಮ ಶೆಟ್ಟಿ,ರಮಾನಾಥ ರಾಯಿ ಮೊದಲಾದವರಿದ್ದರು. ಬೆಳಿಗ್ಗೆ ತಹಶೀಲ್ದಾರ್ ರಶ್ಮೀ ಎಸ್.ಆರ್.ಅವರು ಈ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ್ದರು.    ನವೆಂಬರ್  13 ವರೆಗೆ ಛಾಯಾ ಚಿತ್ರ ಪ್ರದರ್ಶನ ನಡೆಯಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here