ಅಡ್ಯನಡ್ಕ: ಇಲ್ಲಿನ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ನೂತನ ಶೌಚಾಲಯ ಕಟ್ಟಡದ
ಉದ್ಘಾಟನಾ ಕಾರ್ಯಕ್ರಮ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 7ರಂದು ನಡೆಯಿತು.
ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆಯ ಕೊಡುಗೆಯಿಂದ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ನೂತನ ಶೌಚಾಲಯ
ಕಟ್ಟಡವನ್ನು ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಚೀಫ್ ಮೇನೇಜರ್ ವೀಣಾ ಟಿ. ಶೆಟ್ಟಿ ಉದ್ಘಾಟಿಸಿ
ಮಾತನಾಡಿದರು. ನಳಂದ ಕಾಲೇಜು ಪೆರ್ಲ ಇಲ್ಲಿನ ಪ್ರಾಂಶುಪಾಲ, ಸಂಸ್ಥೆಯ ಹಳೆವಿದ್ಯಾರ್ಥಿ ಹಾಗೂ ಆಡಳಿತ ಮಂಡಳಿ ಸದಸ್ಯ ಡಾ.
ವಿಘ್ನೇಶ್ವರ ವರ್ಮುಡಿ ಅವರು ಸಂಸ್ಥಾಪಕರಾದ ವಾರಣಾಶಿ ಸುಬ್ರಾಯ ಭಟ್ ಹಾಗೂ ಸಾಯ ಕೃಷ್ಣ ಭಟ್ ಅವರ ಸಂಸ್ಮರಣಾ
ಭಾಷಣ ನೆರವೇರಿಸಿದರು. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪಿ. ಜಯರಾಮ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಪ್ರಸ್ತಾವನೆಗೈದರು. ದತ್ತಿನಿಧಿಯ ವರದಿಯನ್ನು ಜನತಾ
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ವಾಚಿಸಿದರು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ಎಂ.
ಬಾಯಾರು, ಶೆಲ್ಟರ್ ಕನ್‌ಸ್ಟ್ರಕ್ಷನ್ಸ್ ಮಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ಜನತಾ ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಿ.
ಶ್ರೀನಿವಾಸ್, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್, ಜನತಾ ಆಂಗ್ಲಮಾಧ್ಯಮ ಶಾಲೆಯ
ಮುಖ್ಯೋಪಾಧ್ಯಾಯನಿ ರಮ್ಯಶ್ರೀ ಉಪಸ್ಥಿತರಿದ್ದರು.
ಸ್ಥಾಪಕರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ದತ್ತಿನಿಧಿ ಹಾಗೂ ವಾರ್ಷಿಕೋತ್ಸವದ ಪ್ರಯುಕ್ತ ಬಹುಮಾನ
ವಿತರಣೆ ನಡೆಯಿತು. ಅಧ್ಯಾಪಕ ವೃಂದದ ಸುಗುಣ, ಸುಂದರ್, ಯಶಸ್ವಿನಿ, ಕುಸುಮಾವತಿ, ಗೀತಾಕುಮಾರಿ ಹಾಗೂ ವಸಂತ ಗೌಡ
ಬಹುಮಾನ ವಿಜೇತರ ವಿವರ ವಾಚಿಸಿದರು. ಉಪನ್ಯಾಸಕರಾದ ಸೋಮಶೇಖರ್ ಹಾಗೂ ಗಣೇಶ್ ಕೆ. ಆರ್. ಪರಿಚಯಿಸಿದರು.
ವಿದ್ಯಾರ್ಥಿಗಳಾದ ಶರಣ್ಯ, ವಿಜೇತ ಹಾಗೂ ಕಾವ್ಯ ಸಾಗರ್ ನಿರೂಪಿಸಿದರು. ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ವಂದಿಸಿದರು.
ದಿವಂಗತ ಪಾರ್ವತಿ ಅಮ್ಮನವರ ಸ್ಮರಣಾರ್ಥ, ಮಗ ನಾರಾಯಣ ಜೋಶಿ ಚವರ್ಕಾಡು ಅವರಿಂದ ಸಿಹಿತಿಂಡಿ ವಿತರಣೆ ನಡೆಯಿತು.
ಪೂರ್ವಾಹ್ನ ಸಂಸ್ಥೆಯ ಧ್ವಜಾರೋಹಣವನ್ನು ಅಡ್ಯನಡ್ಕ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ
ನೆರವೇರಿಸಿದರು. ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಅಪರಾಹ್ನ ಹಳೆ ವಿದ್ಯಾರ್ಥಿ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ
ಜರುಗಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here