ಬಂಟ್ವಾಳ : ಕೇಂದ್ರ ಸ್ಥಾನ ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬಳಿ ಇರುವ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಪ್ರತಿದಿನ ಸಂಜೆ 5ರಿಂದ ರಾತ್ರಿ 10 ಗಂಟೆವರೆಗೆ ವಸ್ತುಪ್ರದರ್ಶನ, ರೋಬಾಟಿಕ್ ಕಾಡುಪ್ರಾಣಿಗಳ ಪ್ರದರ್ಶನ ನಡೆಯಲಿದೆ ಎಂದು ಎಂದು ಪ್ರದರ್ಶನ ಸಂಸ್ಥೆಯಾದ ಎಕ್ಸಿಬಿಷನ್ ಇಂಡಿಯಾದ ಪ್ರಮುಖ ಎಂ.ಎಸ್.ನಾಗಚಂದ್ರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

 

ಸಾರ್ವಜನಿಕರಿಗಾಗಿ ಶಾಪಿಂಗ್, ಫನ್ ಎಂಟರ್ಟೈನ್ಮೆಂಟ್ ಕಾರ್ಯಕ್ರಮವನ್ನು ಹಾಗೂ ಪುಡ್ ಕಾರ್ನರ್ ಗಳನ್ನು ಶಾಪ್ ಗಳು ಇವೆ.
ಇಲ್ಲಿನ ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಮತ್ತು ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ವಸ್ತುಪ್ರದರ್ಶನ ಅಧಿಕೃತವಾಗಿ ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿದ್ದು, ಉಪಾಧ್ಯಕ್ಷ ಅಬ್ಬಾಸ್ ಆಲಿ, ನ್ಯಾಯವಾದಿ ಅಶೋಕ್ ಬರಿಮಾರು, ಸಾಮಾಜಿಕ ಕಾರ್ಯಕರ್ತ ಎಸ್.ಎಂ.ಇಸ್ಮಾಯಿಲ್, ಎಂ.ಸುಬ್ಬರಾವ್, ಫಾರೂಕ್ ಭಾಗವಹಿಸಿದ್ದರು. ಬಂಟ್ವಾಳದಲ್ಲಿ ಇದೇ ಪ್ರಥಮವಾಗಿ ವಸ್ತುಪ್ರದರ್ಶನವನ್ನು ನಾವು ಆಯೋಜಿಸುತ್ತಿದ್ದು, ಸ್ವಚ್ಛತೆ, ಆರೋಗ್ಯದ ಕಡೆ ಗಮನ, 100ಕ್ಕೂ ಅಧಿಕ ಮಳಿಗೆಗಳು, ಮನರಂಜನೆ, ಮಕ್ಕಳಿಗೆ ಬೋಟಿಂಗ್, 20ಕ್ಕೂ ಅಧಿಕ ಆಟದ ಸಾಮಾಗ್ರಿಗಳು ಇರಲಿವೆ , ಇಲ್ಲಿನ ಜನರ ಸಹಕಾರ ಪ್ರೋತ್ಸಾಹ ಸಿಕ್ಕಿದರೆ ಮುಂದಿನ ವರ್ಷವೂ ವಸ್ತು ಪ್ರದರ್ಶನ ಆಯೋಜಿಸಲು ಸಹಕಾರಿ ಯಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಒಟ್ಟು ನಾಲ್ಕು ಪ್ರದರ್ಶನಗಳನ್ನು ನೀಡಿದ್ದು, ಇದು ಐದನೇ ಪ್ರದರ್ಶನ, ರೋಬೋಟಿಕ್ ಎನಿಮಲ್ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಹ್ಯಾಂಡ್ಲೂಮ್, ಕೈಮಗ್ಗದ ವಸ್ತುಗಳು, ಮನೆಬಳಕೆ ಸಾಮಾಗ್ರಿಗಳು, ಪುಸ್ತಕ, ಫುಡ್ ಕೋರ್ಟ್, ಸಂಗೀತ ಕಾರಂಜಿ, ದೊಡ್ಡ ಜಯಂಟ್ ವೀಲ್, ಟೊರಾ ಟೊರಾ, ಬ್ರೇಕ್ ಡ್ಯಾನ್ಸ್, ಡ್ರ್ಯಾಗನ್ ಟ್ರೈನ್, ವಾಟರ್ ಬೋಟ್, ಬೌನ್ಸಿ ಮತ್ತು ಮಕ್ಕಳ ಅಮ್ಯೂಸ್ ಮೆಂಟ್ ಇರಲಿದೆ ಎಂದವರು ಮಾಹಿತಿ ನೀಡಿದರು. ಶಾಲೆಯವರು ಸಂಪರ್ಕಿಸಿದರೆ, ಶೇ.50ರಷ್ಟು ರಿಯಾಯಿತಿಯನ್ನು ಪ್ರವೇಶ ದರದಲ್ಲಿ ನೀಡಲಾಗುತ್ತದೆ ಎಂದರು. ಸುಮಾರು 1 ಲಕ್ಷದಷ್ಟು ಗ್ರಾಹಕರು ಆಗಮಿಸುವ ನಿರೀಕ್ಷೆ ಇದ್ದು, ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಪಾಟೀಲ್, ಮಹಮ್ಮದ್ ಕಬೀರ್, ಎಸ್.ಶಿವಕುಮಾರ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here