ವಿಟ್ಲ: ಚಂದಳಿಕೆ ಯುವಕೇಸರಿ ಅಬೀರಿ ಅತಿಕಾರಬೈಲು ಆಶ್ರಯದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ೫ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಪ್ರೋ ಮಾದರಿಯ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡ ಮುಂಡ್ಕೂರು ಫ್ರೆಂಡ್ಸ್ ತಂಡವನ್ನು ಮಣಿಸಿ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದುಕೊಂಡರೆ, ಎಸ್‌ಡಿಎಂ ಉಜಿರೆ ಹಾಗೂ ಮಹಾದೇವಿ ಕಬಕ ತಂಡ ಕ್ರಮವಾಗಿ ತೃತೀಯ ಹಾಗೂ ಚತುರ್ಥ ಬಹುಮಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಬಡವರ ಸೇವೆ ಶ್ರೇಷ್ಠ ಕಾರ್ಯವಾಗಿದೆ. ಸಂಘಟನೆಗಳ ಮೂಲಕ ಬಡಕುಟುಂಬಗಳ ಗುರುತಿಸುವ ಕಾರ್ಯಗಳು ನಡೆಯಬೇಕು. ಸಂಘಟನೆಗಳು ಬಡವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡಾಗ ಬಡವರು ಹಾಗೂ ಸಂಘಟನೆಗಳು ಅಭಿವೃದ್ಧಿ ಹೊಂದುತ್ತದೆ ಎಂದರು.
ಚಂದಳಿಕೆ ಸರಕಾರಿ ಶಾಲೆಗೆ ಧನಸಹಾಯ ವಿತರಿಸಲಾಯಿತು. ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡು ಹಿಡಿದ ಲೀಮಾ ಮ್ಯಾಥ್ಯೂ ಅಡ್ಯನಡ್ಕ ಹಾಗೂ ಉದ್ಯಮಿ ಕೆ. ಸದಾಶಿವ ಆಚಾರ್ಯ ಕೈಂತಿಲ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ ಪಟ್ಲ, ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಚೆಲ್ಲಡ್ಕ, ಜಿಲ್ಲಾ ಕಂಬಳ ಸಮಿತಿ ಸದಸ್ಯ ತ್ರಿಶಾಲ್ ಪೂಜಾರಿ, ಉದ್ಯಮಿ ದೇಜಪ್ಪ ಪೂಜಾರಿ ನಿಡ್ಯ, ನಟಿ ನವ್ಯ ಪೂಜಾರಿ, ವಿಟ್ಲ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಮಂಜುನಾಥ ಕಲ್ಲಕಟ್ಟ, ನಾಗೇಶ ಬಸವನಗುಡಿ, ಸಂಜೀವ ಪೂಜಾರಿ ನಿಡ್ಯ, ದಯಾನಂದ ಶೆಟ್ಟಿ ಉಜ್ರೆಮಾರ್, ವಿಠಲ ಪೂಜಾರಿ ಅತಿಕಾರಬೈಲು, ಸುಶಾಂತ್ ಸಾಲಿಯಾನ್ ಚಂದಳಿಕೆ, ದುರ್ಗಾಪ್ರಸಾದ್ ಅತಿಕಾರಬೈಲು ಉಪಸ್ಥಿತರಿದ್ದರು.
ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸುರೇಶ್ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.