ಬಂಟ್ವಾಳ: ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಲ್ಲಿ 33 ವರ್ಷಗಳ ಕಾಲ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ಉಷಾ ಕುಮಾರಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಬಂಟ್ವಾಳ ಬಿ.ಕಸ್ಬಾ ವಲಯದ ವತಿಯಿಂದ  ಪುರಸಭಾ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ವತಿಯಿಂದ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ  ಉಷಾ ಕುಮಾರಿ ,  ಸಾಮರಸ್ಯದ ಜೀವನ ಅಂಗನವಾಡಿ ಕಾರ್ಯಕರ್ತೆಯರದ್ದು. ಮಹಾಮಾತೆಯರಾಗಿ ಕೆಲಸ ಮಾಡುವ ಕಾರ್ಯಕರ್ತೆಯರ  ಬಗ್ಗೆ ನನಗೆ ತುಂಬಾ ಗೌರವ ಇದೆ. ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೂಲಕ  ಮಹಿಳೆಯರ ಸೇವೆ ಮಾಡಲು ಸಿಕ್ಕಿರುವುದು  ನಮ್ಮ ಸೌಭಾಗ್ಯ ಎಂದ ಅವರು , ಕೆಲಸವನ್ನು ನಿಯತ್ತಿನಿಂದ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯಾಧಿಕಾರಿ ಲೀಲಾವತಿ, ಇಂಜಿನಿಯರ್ ಡೆಮೆಲ್ಲೋ, ಪುರಸಭಾ ಸದಸ್ಯೆ ರಾದ ರೇಖಾ ಪೈ, ಮತ್ತು ಶಶಿಕಲಾ  ಅವರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ವಾಣಿ ಶೆಟ್ಟಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here