ಬಂಟ್ವಾಳ: ಶುಕ್ರವಾರ ಬಂಟ್ವಾಳಕ್ಕಾಗಮಿಸಿದ   ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವರಾದ  ಈಶ್ವರಪ್ಪ ನವರು ಖಾಸಗಿ ಭೇಟಿಯ ನಿಮಿತ್ತ  ಮಂಗಳೂರು ವಿಧಾನ ಸಭಾ ಕ್ಷೇತ್ರದ ಬೋಳಿಯಾರ್ ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಚಿವರನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಸಂತೋಷ್ ಬೋಳಿಯಾರ್ ಅವರು ಸ್ವಾಗತಿಸಿದರಲ್ಲದೆ ಸಚಿವರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ರಾಜಾರಾಮ್ ಭಟ್, ಸಂಜೀವ ಅಂಬ್ಲಮೊಗರು, ಪ್ರಕಾಶ್ ಸಿಂಪೊನಿ, ಪ್ರಶಾಂತ್ ಗಟ್ಟಿ, ನವೀನ್ ಪಾದಲ್ಪಾಡಿ ಸಹಿತ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here