ಬಂಟ್ವಾಳ: ಇಲ್ಲಿನ ನ್ಯಾಯಾಲಯದ ಅವರಣದಲ್ಲಿ ‘ಸಂವಿಧಾನ ದಿವಸ’ ದಿನಾಚರಣೆಯನ್ನು ಆಚರಿಸಲಾಯಿತು. ಬಂಟ್ವಾಳ ಹಿರಿಯವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಇಮ್ತೊಯಾಜ್ ಅಹಮ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಭಾರತೀಯರಮನೋಭಾವನೆ,ಜೀವನ ಹಾಗೂ ಮೌಲ್ಯಗಳಿಗೆ ಜೀವ ತುಂಬುವಂತಹ ಗ್ರಂಥವಾಗಿದ್ದು, ಇದಕ್ಕೆ ಜೀವ ತುಂಬುವ ಕೆಲಸ ನಮ್ಮಿಂದಾಗಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹಿರಿಯ ವಕೀಲ ರಮೇಶ್ ಉಪಾಧ್ಯಾಯ ಅವರು70 ವರ್ಷಗಳ ಹಿಂದೆ ಜಾತಿ ವ್ಯವಸ್ಥೆ ಕಡಿಮೆ.ಹೊಸ ಆಲೋಚನೆಯೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನದಲ್ಲಿ ಸ್ಪಷ್ಟ ಶಬ್ದಗಳನ್ನು ಅಳವಡಿಸಿರುವುದು ಬಹು ದೊಡ್ಡ ಕೆಲಸ ಎಂದರು.ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು.ಅಪರ ಸರಕಾರಿ ಸಿವಿಲ್ ವಕೀಲರಾದ ಸತೀಶ್ ಶಿವಗಿರಿ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕಗಷ ಚಂದ್ರಶೇಖರ ರಾವ್ ಪುಂಚಮೆ ಕಾರ್ಯಕ್ರಮ ನಿರೂಪಿಸಿದರು.