ಬಿ.ಸಿ.ರೋಡ್ : ಸಂತಸಕ್ಕೂ ದೇಹದ ಆರೋಗ್ಯಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ. ಸಂತುಷ್ಟ ಜೀವನವೇ ಆರೊಗ್ಯದ ತಳಹದಿ. ಮನಸ್ಸು ನಿರ್ವಿಕಾರದಿಂದ ಕೂಡಿ ಆನಂದಾನುಭೂತಿಯನ್ನು ಪಡೆಯಲು ಧ್ಯಾನ, ಯೋಗದ ಆಗತ್ಯವಿದೆ. ವಿಶ್ವಕ್ಕೆ ಭಾರತ ನೀಡಿದ ಮಹತ್ವದ ಕೊಡುಗೆಯನ್ನು ನಮ್ಮ ದೇಶದ ಪ್ರಧಾನಿಯವರು ವಿಶ್ವಸಂಸ್ಥೆಯಲ್ಲಿ ಫೋಷಣೆ ಮಾಡುವ ಮೂಲಕ ಭಾರತದ ಭದ್ರತೆಯನ್ನು ಮನುಕುಲದ ಒಳಿತಿನ ಮಹತ್ವವನ್ನು ತಿಳಿಸಿದ್ದಾರೆ ಎಂದು ಹೇಳುವ ಮೂಲಕವಾಗಿ ಪಂಡಿತರಿಂದ, ಪಾರಮ್ಯವರಗೆ ವಿದ್ಯಾರ್ಥಿಗಳಿಂದ ವೃದ್ಧರವರೆಗೆ ಸಂತಸವನ್ನು ಅನುಭವಿಸುವ ಮತ್ತು ಹಂಚುವ ವಿಧಾನಗಳನ್ನು ವಿಸೃತವಾಗಿ ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಸಂಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಖರ ಉಡುಪ ಡಾಕ್ಟರ್‌ ಜೀ  ತಿಳಿಸಿದರು.
ಅವರು ಭಾನುವಾರ ವಳವೂರಿನ ಬಂಟರಭವನದಲ್ಲಿ ಬಂಟ್ವಾಳ ವಿವೇಕ ಜಾಗ್ರತ ಬಳಗದ ವತಿಯಿಂದ ನಡೆದ ವಿಶೇಷ ಚಿಂತನ ಸಮಾವೇಶದಲ್ಲಿ ಮಾತನಾಡಿ ಹಲವು ದೃಷ್ಟಾಂತಗಳ ಮೂಲಕ ಮಾನವರು ಹೇಗೆ ಉತ್ತಮ ರೀತಿಯಲ್ಲಿ ಬದುಕಬಹುದು ಎಂಬುದನ್ನು ತಿಳಿಹೇಳಿದರು. ಕೆ. ಸಂದೇಶ ರಾವ್ ಕಾರ್ಯಕ್ರಮ  ನಿರೂಪಿಸಿದರು. ಸೀತಾರಾಮ ಉಡುಪ ಸ್ವಾಗತಿಸಿದರು. ಪ್ರಕಾಶ್ ಕುಮಾರ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here