ಬಂಟ್ವಾಳ: ಪೊಳಲಿ ಸೇವಾ ಸಹಕಾರ ಸಂಘ ಇದರ ನೂತನ ಅಮ್ಮುಂಜೆ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ 66 ನೇ ಸಹಕಾರ ಸಪ್ತಾಹದ ಉದ್ಘಾಟನೆ ಮತ್ತು ಗ್ರಾಮೀಣ ಸಹಕಾರ ಸಂಘಗಳ ಮೂಲಕ ಅನ್ವೇಷಣೆ ದಿನಾಚರಣೆ ಕಾರ್ಯಕ್ರಮ ಹಾಗೂ ಅಮ್ಮುಂಜೆ ಶಾಖೆಯ ವಠಾರದಲ್ಲಿ ಗುರುವಾರ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಸೌರ್ಣ ಸೌಧದ ಲೋಕಾರ್ಪಣೆ ನೆರವೇರಿಸಿ ಮಾತನಾಡಿ, ಮನುಷ್ಯನ ಜೀವನ ನಡೆಯುವುದೇ ಸಹಕಾರದಿಂದ. ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಮುಂದುವರಿದಿರುವುದು ಅಭಿನಂದನೀಯ. ಜನ ಸಮಾನ್ಯರು‌ ಮೊತ್ತ ಮೊದಲು ತಲುಪುವ ಕ್ಷೇತ್ರವೊಂದಿದ್ದರೆ ಅದು ಸಹಕಾರಿ‌ ಮಾತ್ರ ಎಂದು ಹೇಳಿದರು.
ಡಿಸಿಸಿ ಅಧೀನದ ನಷ್ಟ ದಲ್ಲಿರುವ ಸಹಕಾರಿ ಬ್ಯಾಂಕ್ ಗಳನ್ನು ರಕ್ಷಣೆ ಮಾಡುವ ಕೆಲಸವಾಗಬೇಕಾಗಿದೆ. ಸಹಕಾರಿ ಸೇವಾ ಸಂಘ ಸಾಮಾನ್ಯರಿಗೆ ಸಹಕಾರಿಯಾಗಲಿ ಎಂದು ಹೇಳಿದರು.

 

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸೇವಾ ಸಂಘ ಬಲಾಢ್ಯವಾಗಿ ಬೆಳೆದಿದ್ದು, ನೂರಕ್ಕು ನೂರು ಸಾಲ‌ ಮರುಪಾವತಿ ಮಾಡುವ ಮೂಲಕ ದ.ಕ. ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಇಲ್ಲಿನ ಠೇವಣಾತಿ ಈ ಪ್ರದೇಶದ ಅಭಿವೃದ್ಧಿಗಾಗಿ ಮೀಸಲಾಗಿದೆಯೇ ವಿನಃ ವಾಣಿಜ್ಯ ಲಾಭಕ್ಕಲ್ಲ.ನಿಮ್ಮ ಹಣ ನಿಮ್ಮ ಕಾರ್ಯವ್ಯಾಪ್ತಿಗೆ ಉಪಯೋಗಿಸಿ ಸಹಕಾರಿ ಸಂಘ ಬೆಳೆಸಬೇಕಾಗಿದೆ ಎಂದರು.
ಈ‌ ಸಂಘವು ಜನರಿಗೆ ಸೇವೆ ನೀಡುವ ಕ್ಷೆತ್ರವಾಗಿದ್ದು, ಕಷ್ಟ ಕಾಲದಲ್ಲಿಯೂ ಇದನ್ನು ಉಳಿಸಿ ಕೆಲಸವಾಗಬೇಕಾಗಿದೆ. ಸಂಘವು ಕಾರ್ಪೋರೆಟ್ ಸಂಸ್ಥೆಯ ಮಿಗಿಲಾಗಿ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೊಸ ತಂತ್ರಜ್ಞಾನ ವ್ಯವಸ್ಥೆ ಜಾರಿಗೊಳಿಸುವ ಯೋಜನೆ ನಮ್ಮುಂದಿದೆ. ಡಿಸಿಸಿ ಬ್ಯಾಂಕ್ ನ ಸಿಬಿಸಿ ತಂತ್ರಜ್ಞಾನ ದಿಂದ ಜೋಡಿಸಿ, ಉನ್ನತೀಕರಿಸಲಾಗುವುದು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪಿಎಲ್ಡ್ ಬ್ಯಾಂಕುಗಳು ಸೋಲನ್ನು ಕಂಡಿದ್ದು, ಕೇವಲ 10 ಬ್ಯಾಂಕುಗಳು ಸಾಲ ನೀಡಲು ಅರ್ಹತೆಯನ್ನು ಹೊಂದಿದೆ. ಭೂ ಮಸೂದೆ ಕಾಯ್ದೆ ಬಂದ ನಂತರ ದಿನಗಳಲ್ಲಿ ಸಹಕಾರ ಸಂಘ ಬೆಳೆದಿದೆ. ವರ್ತಮಾನ ಕಾಲದಲ್ಲಿ ಸಹಕಾರ ಸಂಘಗಳು ಸಾಕಷ್ಟು ವ್ಯತ್ಯಸವನ್ನು ಹೊಂದಿದೆ. ಪ್ರದೇಶದ ರೈತರಿಗೆ ಸಾಲ ಕೋಡುವ ಸಹಕಾರ ಬ್ಯಾಂಕಾಗಿ ಬೆಳೆಯಬೇಕಾಗಿದೆ ಎಂದು ಹೇಳಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯರವಿ ಫರ್ನಾಂಡಿಸ್ ಪ್ರಸ್ತಾವಿಕವಾಗಿ ಮಾತನಾಡಿ, ಪೊಳಲಿ ಸೇವಾ ಸಹಕಾರ ಸಂಘ ಅಮ್ಮುಂಜೆಯಲ್ಲಿ ಪ್ರಾರಂಭ ವಾಗಿ ತನ್ನ 50ವರ್ಷ ಪೂರೈಸಿದ ಸವಿ ನೆನಪಿಗಾಗಿ ಉಗಮಸ್ಥಾನವಾದ ಅಮ್ಮುಂಜೆಯಲ್ಲಿ ಸುಮಾರು 10 ಸೆಂಟ್ಸ್ ಜಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಸ್ವರ್ಣ ಸೌಧದ ನಿರ್ಮಾಣ ವಾಗಿದೆ ಎಂದರು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸಹಕಾರ ಸಪ್ತಾಹ ಉದ್ಘಾಟಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಪ್ರಗತಿಪರ ಕೃಷಿಕ ಚಂದ್ರಶೇಖರ ರಾವ್, ಯಕ್ಷಗಾನ ಕಲಾವಿದ ಅ.ನ.ಭ, ಮೋಹನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವೇದಿಕೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಕಲ್ಪವೃಕ್ಷ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಪ್ರವೀಣ್ ಬಿ.ನಾಯ್ಕ್, ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ತಾಪಂ ಸದಸ್ಯ ಶಿವಪ್ರಸಾದ್, ಪ್ರಶಾಂತ್ ಪೂಜಾರಿ, ಅಮ್ಮುಂಜೆ ಗ್ರಾಪಂ ಅಧ್ಯಕ್ಷೆ ಪ್ರೇಮಾ ಲತಾ, ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಕೇಶವ ಕಿಣಿ, ಪುರುಷೋತ್ತಮ ಎಸ್. ಪಿ., ನಿರ್ದೇಶಕರಾದ ಯೋಗೀಶ್, ಅಬೂಬಕರ್, ಗೋಪಾಲ್ ಅಂಚನ್, ವಿಜಯ ಫರ್ನಾಂಡೀಸ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಜರಿದ್ದರು.
ಸಂಘದ ಉಪಾಧ್ಯಕ್ಷ ಪಿ.ವೆಂಕಟೇಶ್ ನಾವಡ ಸ್ವಾಗತಿಸಿದರು. ನಿರ್ದೇಶಕ ಅಬೂಬಕರ್ ವಂದಿಸಿದರು. ಪ್ರದೀಪ್ ರೈ ಪುತ್ತೂರು ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here