ಬಂಟ್ವಾಳ: ಬಿದ್ದು ಸಿಕ್ಕಿದ ಚಿನ್ನದ ಬ್ರೆಸ್ ಲೈಟ್ ನ್ನು ವಾರಸುದಾರರಿಗೆ ವಾಪಸು ನೀಡಿ ಪ್ರಮಾಣಿಕತೆ ಮೆರೆದ ಕಾರು ಚಾಲಕ.
ಬಂಟ್ವಾಳ ತಾಲೂಕಿನ ವಾಮದಪದವು ನಿವಾಸಿ ಕಾರು ಚಾಲಕ ಧರ್ಣಪ್ಪ ಎಂಬವರಿಗೆ ಪಡೀಲ್ ರೈಲ್ವೆ ಒವರ್ ಬ್ರಿಡ್ಜ್ ನ ಕೆಳಭಾಗದಲ್ಲಿ ಈ ಬ್ರೆಸ್ ಲೈಟ್ ಸಿಕ್ಕಿತ್ತು.
ಎರಡು ದಿನಗಳ ಹಿಂದೆ ಬಂಗಾರದ ಬ್ರೆಸ್ ಲೈಟ್ ಕಳೆದು ಹೋದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ಸಿಕ್ಕಿದಲ್ಲಿ ನೀಡುವಂತೆಯೂ ಪತ್ರಿಕೆಗಳಲ್ಲಿ ಮನವಿ ಮಾಡಿದ್ದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೊಡಂಕಾಪು ನಿವಾಸಿ ಶಿಕ್ಷಕ ರವೀಂದ್ರ ಕೆ ಅವರ ಕೈಯಲ್ಲಿದ್ದ ಸುಮಾರು 1.20 ಲಕ್ಷ ಬೆಲೆ ಬಾಳುವ 5 ಪವನ್ ತೂಕದ ಚಿನ್ನದ ಬ್ರೆಸ್ ಲೈಟ್ ಕಳೆದು ಹೋಗಿತ್ತು.
ಅವರು ಮಂಗಳೂರು ಶಿಕ್ಷಕ-ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದು, ಮನೆಯಿಂದ ತನ್ನ ದ್ವಿಚಕ್ರ ವಾಹನ ದಲ್ಲಿ ಮಂಗಳೂರಿಗೆ ಹೋಗಿದ್ದರು.
ಅದರೆ ಮಂಗಳೂರು ತಲುಪುವ ವೇಳೆ ಕೈಯಲ್ಲಿದ್ದ ಬ್ರೆಸ್ ಲೈಟ್ ಕಳೆದು ಹೋಗಿರುವುದು ಗಮನಕ್ಕೆ ಬಂತು.
ವಾಹನದಲ್ಲಿ ಹೋಗುವ ವೇಳೆ ಕಳೆದುಹೋಗಿರುಬಹುದು ಎಂಬ ಶಂಕೆ ವ್ಯಕ್ತಪಡಿಸುವ ಅವರು ಈ ಬಂಗಾರ ಯಾರಿಗಾದರೂ ಸಿಕ್ಕಿದರೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವಂತೆ ವಿನಂತಿ ಮಾಡಿದ್ದರು.
ಒಂದು ವೇಳೆ ಯಾರಿಗಾದರೂ ಬಿದ್ದು ಸಿಕ್ಕಿದರೆ , ಅವರು ವಾಪಸು ನೀಡಿದರೆ ಅವರಿಗೆ ಸೂಕ್ತವಾದ ಬಹುಮಾನ ನೀಡುವುದಾಗಿಯೂ ತಿಳಿಸಿದ್ದರು.
ಅದರಂತೆ ಚಿನ್ನವನ್ನು ನೀಡಿ ಪ್ರಮಾಣಿಕತೆ ಮೆರೆದ ಕಾರುಚಾಲಕ ಧರ್ಣಪ್ಪ ಅವರಿಗೆ ರವೀಂದ್ರ ಕೆ ಅವರು ಹತ್ತು ಸಾವಿರ ನಗದು ನೀಡಿದ್ದಾರೆ.