ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ವಾರಟೀಲ್ ಮೂಲರಪಟ್ನ ರಸ್ತೆಯು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಅನುದಾನ ಸುಮಾರು 1 ಕೋಟಿ 50ಲಕ್ಷ.ರೂ ರಸ್ತೆ ಕಾಂಕ್ರೀಟಕರಣ ಹೊಂದಿದ್ದು ಸಾವಿರಾರು ಜನರಿಗೆ ಇದರಿಂದ ಉಪಯೋಗವಾಗಲಿದ್ದು, ಈ ರಸ್ತೆಯು ಮೂಲರಪಟ್ನದಿಂದ ವಾರಟೀಲ್ ರಸ್ತೆ ಅಭಿವೃದ್ಧಿಯಿಂದ ಪೊಳಲಿ, ಕಲ್ಪನೆ, ಬೆಂಜನಪದವು, ಗುರುಪುರ ಕೈಕಂಬ ಹಾಗೂ ಸೊರ್ನಾಡು, ಸಿದ್ದಕಟ್ಟೆ, ವಾಮದಪದವು ರಸ್ತೆ ಮುಖಾಂತರ ಸಂಚಾರಕ್ಕೆ ಯೋಗ್ಯವಾಗಿರುತ್ತದೆ. ಶಾಸಕ  ರಾಜೇಶ್ ನಾಯ್ಕ್ ಇವರ ವಿಶೇಷ ಮುತುವರ್ಜಿಯಿಂದ ಈ ಕಾಮಗಾರಿ ಪ್ರಾರಂಭಗೊಂಡು ನ. 9ರ ಶನಿವಾರ ಶಾಸಕರಿಂದ ಉದ್ಫಾಟನೆಗೊಳ್ಳುಲಿದ್ದು, ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಊರ ನಾಗರಿಕರು ಭಾಗವಹಿಸಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here