ಬಂಟ್ವಾಳ: ತಾಲೂಕಿನ ಕಾವಳ ಪಡೂರು ಗ್ರಾಮದ ಮಧ್ವ ಶಾಲೆಯ ಸಮೀಪ ಕಿರಾಣಿ ಅಂಗಡಿಗೆ ನಿನ್ನೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಮದ್ಯ ಶೇಖರಿಸಿಟ್ಟಿರುವುದನ್ನು ಪತ್ತೆ ಹಚ್ಚಿದ್ದು,ಈ ಸಂಬಂಧ ಒರ್ವನನ್ನು ಬಂಧಿಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬ್ಬಂದಿಗಳು ಈ ದಾಳಿ ನಡೆಸಿದ್ದು, ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಸುಮಾರು 3.24 ಲೀಟರ್ ಅಕ್ರಮ ಮದ್ಯ, ಹಾಗೂ ನಗದು 400 ರೂ. ವನ್ನು ವಶಪಡಿಸಿ, ಮಧ್ವ ನಿವಾಸಿ ಸತೀಶ್( 47) ಎಂಬಾತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.