ಬಂಟ್ವಾಳ: ವ್ಯಕ್ತಿಯೋರ್ವರ ಬಂಗಾರದ ಬ್ರೆಸ್ ಲೈಟ್ ಕಳೆದು ಹೋದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೊಡಂಕಾಪು ನಿವಾಸಿ ಶಿಕ್ಷಕ ರವೀಂದ್ರ ಕೆ ಅವರ ಕೈಯಲ್ಲಿದ್ದ ಸುಮಾರು 1.20 ಲಕ್ಷ ಬೆಲೆ ಬಾಳುವ 5 ಪವನ್ ತೂಕದ ಚಿನ್ನದ ಬ್ರೆಸ್ ಲೈಟ್ ಕಳೆದು ಹೋಗಿದೆ ಎಂದು ಅವರು ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅವರು ಮಂಗಳೂರು ಶಿಕ್ಷಕ-ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದು, ಇಂದು ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆ ಮನೆಯಿಂದ ತನ್ನ ದ್ವಿಚಕ್ರ ವಾಹನ ದಲ್ಲಿ ಮಂಗಳೂರಿಗೆ ಹೋಗಿದ್ದರು.
ಅದರೆ ಮಂಗಳೂರು ತಲುಪುವ ವೇಳೆ ಕೈಯಲ್ಲಿದ್ದ ಬ್ರೆಸ್ ಲೈಟ್ ಕಳೆದು ಹೋಗಿರುವುದು ಗಮನಕ್ಕೆ ಬಂತು.
ವಾಹನದಲ್ಲಿ ಹೋಗುವ ವೇಳೆ ಕಳೆದುಹೋಗಿರುಬಹುದು ಎಂಬ ಶಂಕೆ ವ್ಯಕ್ತಪಡಿಸುವ ಅವರು ಈ ಬಂಗಾರ ಯಾರಿಗಾದರೂ ಸಿಕ್ಕಿದರೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವಂತೆ ವಿನಂತಿ ಮಾಡಿದ್ದಾರೆ.
ಒಂದು ವೇಳೆ ಯಾರಿಗಾದರೂ ಬಿದ್ದು ಸಿಕ್ಕಿದರೆ , ಅವರು ವಾಪಸು ನೀಡಿದರೆ ಅವರಿಗೆ ಸೂಕ್ತವಾದ ಬಹುಮಾನ ನೀಡುವುದಾಗಿಯೂ ತಿಳಿಸಿದ್ದಾರೆ.