ವಿಟ್ಲ: ಗ್ರಾಮಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಚಾ ಭಾರತ್ ಮಿಷನ್, ತಾಲೂಕು ಪಂಚಾಯಿತಿ, ಅಳಿಕೆ ಗ್ರಾಮ ಪಂಚಾಯತ್ ’ಸ್ವಚ್ಛಮೇವ ಜಯತೆ’ ಎಂಬ ಘೋಷ ವಾಕ್ಯದೊಂದಿಗೆ ನೆಗಳಗುಳಿ ಅಂಗನವಾಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಅಳಿಕೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಳಿಕೆ ಅವರು ಉದ್ಘಾಟಿಸಿ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂ. ಸದಸ್ಯರಾದ ಮೂಕಾಂಬಿಕಾ ಎಂ ಭಟ್, ಗ್ರಾಮದ ಹಿರಿಯರಾದ ಮಹಾಬಲ ಭಟ್, ಆಶಾ ಕಾರ್ಯಕರ್ತೆ ಡೀಲಾಕ್ಷಿ ಅಳಿಕೆ ಶ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
ನಂತರ ಮರಕ್ಕಿಣಿ ಪಿಹೆಚ್‌ಸಿಯಿಂದ ನೆಗಳಗುಳಿ ಅಂಗನವಾಡಿವರೆಗೆ ರಸ್ತೆಯ ಎರಡೂ ಬದಿಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲಾಯಿತು.