ಬಂಟ್ವಾಳ: ಹಾಸನದಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಪಲ್ಟಿಯಾಗಿ ಮೂಲತಃ ಮಾಣಿ ನಿವಾಸಿ ಚಂದಪ್ಪ ಮೂಲ್ಯ ಅವರ ಮೊಮ್ಮಗ, ಉಗ್ಗಪ್ಪ ಮೂಲ್ಯ ಅವರ ಮಗ ಅಭಿಷೇಕ್ (27) ಮೃತಪಟ್ಟಿದ್ದಾನೆ.
ನಿನ್ನೆ ರಾತ್ರಿ ಮಾಣಿಯಿಂದ ಬಸ್ ಹತ್ತಿದ ಅಭಿಷೇಕ್ ಮುಂಜಾನೆಯ ವೇಳೆ ಬಸ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ.
ಆತನಿಗೆ ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದ್ದು ಅತ ಇಂದು ಕೆಲಸಕ್ಕೆ ಸೇರಲಿದ್ದ. ಇತ್ತೀಚೆಗೆ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು.
ನಿನ್ನೆ ಅವರ ಹತ್ತಿರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಅವರ ಊರಿಗೆ ಬಂದಿದ್ದರು. ಮದುವೆ ಮುಗಿಸಿ ವಾಪಾಸು
ಊರಿನಿಂದ ಬಸ್ ಮೂಲಕ ಬೆಂಗಳೂರಿಗೆ ತಮ್ಮನ ಜೊತೆಯಲ್ಲಿ ಪ್ರಯಾಣ ಬೆಳೆಸಿದ್ದ. ಹಾಸನ ಸಮೀಪ ಬಸ್ ಪಲ್ಟಿಯಾಗಿ ಈತ ಮೃತಪಟ್ಟಿದ್ದಾನೆ. ಈತನ ತಮ್ಮನಿಗೂ ಗಾಯಗಳಾಗಿದ್ದು , ಆತ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾನೆ. ಅಭಿಷೇಕ್ ಕಲ್ಲಡ್ಕ ಶ್ರೀ ರಾಮ ಕಲ್ಲಡ್ಕ ಶಾಲೆಯ ವಿದ್ಯಾರ್ಥಿಯಾಗಿದ್ದ.