ಉಜಿರೆ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ವಸಂತ ಮಹಲ್‌ನಲ್ಲಿ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಇದೇ 12 ಮತ್ತು 13 (ಶನಿವಾರ ಮತ್ತು ಭಾನುವಾರ) ವೀಣೆಯ ಬೆಡಗು – ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ನಡೆಯಲಿದೆ. ಎಂದು ಸಂಘಟಕರು ತಿಳಿಸಿದ್ದಾರೆ.
ಇದೇ 12 ರಂದು ಶನಿವಾರ ಸಂಜೆಗಂಟೆ 4 ರಿಂದ ಪ್ರೊ.ಅರವಿಂದ ಹೆಬ್ಬಾರ್ ಮತ್ತು ಬಳಗದವರಿಂದ ವೃಂದಗಾಯನ ನಡೆಯಲಿದೆ. ವಿದ್ವಾನ್ ಕೃಷ್ಣ ಪವನ್‌ಕುಮಾರ್ ಮೃದಂಗ ವಾದಕರಾಗಿ ಸಹಕರಿಸುವರು.

ಸಂಜೆ ಗಂಟೆ 5 ರಿಂದ ಡಾ. ಸಹನಾ, ಎಸ್.ವಿ. (ವೀಣೆ), ವಿದ್ವಾನ್ ಬಿ.ಎಸ್. ಪ್ರಶಾಂತ್ (ಮೃದಂಗ) ಮತ್ತು ವಿದ್ವಾನ್‌ ಟಿ.ಎನ್. ರಮೇಶ್ (ಘಟಂ) ಕಾರ್ಯಕ್ರಮ ನೀಡುವರು.
ಸಂಜೆ ಗಂಟೆ 7ರಿಂದ ಎ. ಕನ್ಯಾಕುಮಾರಿ (ಪಿಟೀಲು) ವಿದ್ವಾನ್ ಬಿ. ವಿಠಲ ರಂಗನ್ (ಸಹವಾದನ) ವಿದ್ವಾನ್‌ ಜಯಚಂದ್ರರಾವ್ (ಮೃದಂಗ), ವಿದ್ವಾನ್‌ಎನ್. ಅಮೃತ್ (ಖಂಜರಿ) ಮತ್ತು ವಿದ್ವಾನ್ ಬಿ. ರಾಜಶೇಖರ್ (ಮೋರ್ಚಿಂಗ್) ಕಾರ್ಯಕ್ರಮ ನಡೆಸಿಕೊಡುವರು.
ಇದೇ 13 ರಂದು ಭಾನುವಾರ ಸಂಜೆಗಂಟೆ 3.30 ರಿಂದ ವಿದ್ವಾನ್ ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ ವೃಂದಗಾಯನ ನಡೆಯಲಿದೆ. ವಿದುಷಿ ಸಿ.ಎಸ್. ಉಷಾ (ಪಿಟೀಲು) ಮತ್ತು ವಿದ್ವಾನ್ ಬಿ.ಎಸ್. ಆನಂದ್ (ಮೃದಂಗ) ಸಹಕರಿಸುವರು.
ಸಂಜೆ ಗಂಟೆ 4.30 ರಿಂದ ಡಾ.ಗೀತಾ ಭಟ್‌ ಅವರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ.
ಸಂಜೆ 5.30 ರಿಂದ ನೀಲಾ ರಾಂಗೋಪಾಲ್‌ ಅವರ ಗಾಯನ ಕಾರ್ಯಕ್ರಮವಿದೆ.
ಸಂಜೆ ಗಂಟೆ 7.30 ರಿಂದ ವಿದ್ವಾನ್‌ ರಾಮಕೃಷ್ಣನ್ ಮೂರ್ತಿ ಮತ್ತು ಬಳಗದವರಿಂದ ಸಂಗೀತಗಾಯನವಿದೆ.
ಪ್ರಶಸ್ತಿ ಪ್ರದಾನ ಸಮಾರಂಭ: ಇದೇ 12 ರಂದು ಶನಿವಾರ ಸಂಜೆ ಗಂಟೆ 6 ರಿಂದ ವಸಂತ ಮಹಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನ ಮಾಡುವರು.

ಪ್ರಶಸ್ತಿ ಪುರಸ್ಕೃತರು: ವೀಣೆ ಶೇಷಣ್ಣ ಸ್ಮಾರಕರಾಷ್ಟ್ರೀಯ ಪ್ರಶಸ್ತಿ: ಪದ್ಮಶ್ರೀ ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ (ಒಂದು ಲಕ್ಷರೂ. ನಗದು ಪುರಸ್ಕಾರ. ಪ್ರಾಯೋಜಕರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು)
ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕರಾಷ್ಟ್ರೀಯ ಪ್ರಶಸ್ತಿ: ಸಂಗೀತ ಕಲಾ ಆಚಾರ್ಯ, ಸಂಗೀತ ಕಲಾ ರತ್ನ ನೀಲಾ ರಾಂಗೋಪಾಲ್ (ಪುರಸ್ಕಾರ: ಒದು ಲಕ್ಷರೂ. ನಗದು ಪ್ರಾಯೋಜಕರು : ಎ.ಎಚ್. ರಾಮರಾವ್, ಅಧ್ಯಕ್ಷರು, ನ್ಯಾಷನಲ್‌ಎಜ್ಯುಕೇಶನ್ ಸೊಸೈಟಿ ಮತ್ತು ಸುಧಾರಾಮರಾವ್, ಬೆಂಗಳೂರು).

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here