Wednesday, April 10, 2024

ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು

 (ಶ್ಯಾಮಲಾ ಮಾಧವ)
ಮುಂಬಯಿ: ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳಿಗಿದು ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮ. ವರ್ಷದ ಹಿಂದೆ ಆರಂಭಗೊಂಡ ಶತಮಾನೋತ್ಸವ ಕಾರ್ಯಕ್ರಮಗಳ ಸಂಭ್ರಮಕ್ಕೆ ಇದೇ 2019ರ ನ.15,16,17ರಂದು ಉದ್ಘಾಟನೆ, ಸಮಾರೋಪಗಳ ಪರ್ವಕಾಲ. ಶಾಲೆ ನಡೆದು ಬಂದ ದಾರಿಯನ್ನು ಜನತೆಯೆದುರು ತೆರೆದಿಡುವ ಚರಿತ್ರಕಾಲ.

ಶತಮಾನದ ಹಿಂದೆ ಅಕ್ಷರ ಜ್ಞಾನವಿಲ್ಲದೆ ದಾರಿದ್ರ್ಯ, ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಸಮಾಜವೊಂದು ಪ್ರಥಮ ಜಾಗತಿಕ ಮಹಾಯುಧ್ಧದ ದಳ್ಳುರಿಯ ಬೇಗೆಯಿಂದೆದ್ದು ಬಂದು ವಿದ್ಯೆಯ ಹೊಂಬೆಳಕಿನಿಂದ ನಾಡನ್ನು ಬೆಳಗಿದ ಅನುಪಮ ಸಾಧನೆಯ ಕಥೆ ಇಲ್ಲಿ ತೆರೆದುಕೊಂಡಿದೆ.

ಮಂಗಳೂರುನ ಸೆರಗು ಹಾಸಿದಂತಿರುವ ಸೋಮೇಶ್ವರ ಉಚ್ಚಿಲದ ಈ ನಾಡಿನಲ್ಲಿ ವಿದ್ಯೆಯ ಶ್ರೀಕಾರ ಹಾಕಿದ ಉದ್ಯಾವರ ಬೀಚ ಬೆಳ್ಚಪ್ಪಾಡರು ಹಾಗೂ ಉಚ್ಚಿಲ ಮಂಜಪ್ಪನವರು ಹಚ್ಚಿದ ಜ್ಞಾನಜ್ಯೋತಿ, ಸಮಾಜವನ್ನೂ, ನಾಡನ್ನೂ ಬೆಳಗಿ ಪ್ರಗತಿಪಥದ ದಾರಿಯನ್ನು ತೆರೆದಿದೆ. 1918ರಲ್ಲಿ ಉಚ್ಚಿಲ ಮಂಜಪ್ಪನವರ ಬಂಗ್ಲೆ ಮನೆಯಲ್ಲಿ ಆರಂಭವಾದ ಶಾಲೆಯ ಸ್ಥಾಪನೆ, ಮಂಜೂರಾತಿ ಎಲ್ಲವೂ ಸಾಧ್ಯವಾದುದು, ಅವರ ಮಕ್ಕಳ ಶತಪ್ರಯತ್ನದಿಂದ. ನಾಡ ಹಿರಿಯರಾದ ನೀಲೇಶ್ವರ ದಾಮೋದರ ತಂತ್ರಿಯವರು ಉದಾರ ಹೃದಯದಿಂದ ಶಾಲೆಗಾಗಿ ಊರ ನಡುಮಧ್ಯೆ ನಿವೇಶನವನ್ನು ದಾನವಾಗಿತ್ತರು. ಇಲ್ಲಿ 1921ರಲ್ಲಿ ಸಮಾಜ ಬಾಂಧವರ ಸಹಕಾರದಿಂದ ಶಾಲೆಗಾಗಿ ಶಾಶ್ವತ, ಸುಂದರ, ಮಾದರಿ ಕಟ್ಟಡ ಒದಗಿ ಬಂತು. 1969 ರಲ್ಲಿ ಶಾಲೆಯ ಸುವರ್ಣಮಹೋತ್ಸವವೂ, 1989ರಲ್ಲಿ ವಜ್ರ ಮಹೋತ್ಸವವೂ ಯಥೋಚಿತವಾಗಿ ನೆರವೇರಿದ್ದು, ಇದೀಗ ಶತವರುಷ ಸಂಭ್ರಮ ತೆರೆದುಕೊಳ್ಳುತ್ತಿದೆ.

ನೂರು ವರುಷ ಹಳೆಯದಾಗಿದ್ದ ಶಾಲಾ ಕಟ್ಟಡ ನವೀಕರಣಗೊಂಡು, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಲ್ಲೇ ಪುನರಾರಂಭವಾಗಿದೆ. ಕಾಲಮಾನದ ಬೇಡಿಕೆಯಂತೆ ಆಂಗ್ಲಮಾಧ್ಯಮ ಪ್ರೌಢಶಾಲೆಯೂ ಸಮೀಪದಲ್ಲೇ ನೂತನ ಕಟ್ಟಡದಲ್ಲಿ ತೆರೆದಿದ್ದು, ಈ ವರ್ಷದ ಎಸ್.ಎಸ್.ಎಲ್.ಸಿ. ಬ್ಯಾಚ್ ನೂರು ಶೇಕಡಾ ಫಲಿತಾಂಶ ತಂದಿದೆ. ಸುವರ್ಣ ಹಾಗೂ ವಜ್ರ ಮಹೋತ್ಸವಗಳ ಸ್ಮಾರಕವಾಗಿ ಫಿಶರೀಸ್ ಹೈಸ್ಕೂಲ್ ಹಾಗೂ ಸಭಾಭವನಗಳ ಸ್ಥಾಪನೆಯಾಗಿದೆ.ಶತಮಾನೋತ್ಸವ ಸ್ಮಾರಕ ಯೋಜನೆಯೂ ರೂಪುಗೊಳ್ಳುತ್ತಿದ್ದು, ಮಹತ್ವಪೂರ್ಣ ಸ್ಮರಣಸಂಚಿಕೆ ಸಿಧ್ಧಗೊಳ್ಳುತ್ತಿದೆ.

ಬೋವತನದಿಂದ ಘಟ್ಟವಿಳಿದು ಕರಾವಳಿಗೆ ಬಂದು ನೆಲೆನಿಂತ ಸಮಾಜವೊಂದು ಶಿಕ್ಷಣ, ಉದ್ಯೋಗ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿ, ಸಾಧನಾ ಪಥದಲ್ಲಿ ಸಾಗಿದೆ. ಈ ಭವ್ಯ ಚರಿತ್ರೆಯ ಶ್ರೀಕಾರ ಬರೆದ ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವ ಆಚರಣಾ ಸಮಿತಿ ವಿದ್ಯಾಭಿಮಾನಿಗಳಿಂದ ಉದಾರ ದೇಣಿಗೆಯ ನಿರೀಕ್ಷೆಯಲ್ಲಿದೆ.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...