ಬಂಟ್ವಾಳ: ಟ್ರಾಫಿಕ್ ಪೊಲೀಸರೊಬ್ಬರು ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ವಾಹನ ಸವಾರೊಬ್ಬರ ನಡುವಿನ ಮಾತಿನಚಕಮಕಿ ಹಾಗೂ ಎಳೆದಾಡಿದ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ಈ ನಡೆಗೆ ಸವಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋದಲ್ಲಿ ತುಣುಕು ಮೆಲ್ಕಾರ್ ಜಂಕ್ಷನ್ ಸಮೀಪದ ಗುಡ್ಡೆಯಂಗಡಿ ರಸ್ತೆಯಲ್ಲಿ ಇಂದು ನಡೆದಿದೆ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಮೆಲ್ಕಾರ್ ಟ್ರಾಫಿಕ್ ಠಾಣೆಯ ಎಎಸ್ಸೈ ಹಾಗೂ ಸಂಚಾರ ಉಲ್ಲಂಘನೆ ಮಾಡಿದ ಸವಾರನ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದ್ದು, ಬಳಿಕ ಎಸ್ಸೈ ಅವರು ಸವಾರನೋರ್ವನ ಬಟ್ಟೆ ಹಿಡಿದು ಎಳೆದಾಡಿದ ಸನ್ನಿವೇಶವನ್ನು ಇನ್ನೋರ್ವ ಸವಾರ ಮೊಬೈಲ್ ಮೂಲಕ ಚಲನಚಿತ್ರ ಚಿತ್ರೀಕರಿಸಿದ್ದಾರೆ. ಪೊಲೀಸರ ಈ ದುರ್ವತನೆಗೆ ಆಕ್ರೋಶ ವ್ಯಕ್ತಪಡಿಸಿ, ವಿವಿಧ ಬರಹಗಳೊಂದಿಗೆ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಘಟನೆಯ ಬಗ್ಗೆಗಿನ ಸ್ಪಷ್ಟ ಮಾಹಿತಿ ಪೊಲೀಸರಿಂದ ನಿರೀಕ್ಷಿಸಲಾಗಿದೆ.