ಬಂಟ್ವಾಳ: ತಾ.ಪಂ.ನ ಜಾಗದ ಅವರಣಗೋಡೆಯನ್ನು ಕೆಡವಿದ ಬಗ್ಗೆ ಹಾಗೂ ತಾ.ಪಂ.ನ.ಆಸ್ತಿಯ ಅತಿಕ್ರಮಣದ ಬಗ್ಗೆ ತಾ.ಪಂ.ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಕರೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪರ ವಿರೋಧ ಚರ್ಚೆಗಳಿಗೆ ವೇದಿಕೆಯಾಯಿತು.
ಸದಸ್ಯರ ನಡುವಿನ ಮಾತಿನ ಚಕಮಕಿ ಕೆಲಹೊತ್ತು ಗೊಂದಲದ ವಾತವರಣ ನಿರ್ಮಾಣ ಮಾಡಿತು. ಅಧ್ಯಕ್ಷರು ಸಭೆಯ ಉದ್ದೇಶದ ಬಗ್ಗೆ ಪ್ರಸ್ತಾಪಿಸಿದರು.


ಪ್ರಸಾದ್ ವಕೀಲರು ಎಂಬವರು ತಾ.ಪಂ.ನ.ಅವರಣಗೋಡೆಯನ್ನು ಅಕ್ರಮವಾಗಿ ತೆರವುಮಾಡಿದ್ದಾರೆ ಇದು ತಾ.ಪಂ.ಗೆ ಅಗೌರವ ಹಾಗಾಗಿ ಇವರ ಮೇಲೆ ಕಾನೂನು ಕ್ರಮಕೈಗೊಳ್ಳಲು ನಿರ್ಣಯ ಮಾಡಲು ಅವಕಾಶ ನೀಡಬೇಕು ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯಲ್ಲಿ ತಿಳಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಅತಿಕ್ರಮಣ ಮಾಡಿ ಅವರಣಗೋಡೆ ತೆರವು ಮಾಡಿದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾದರೆ ಈ ಹಿಂದೆ ಯಾರೆಲ್ಲಾ ತಾ.ಪಂ.ನ ಆಸ್ತಿಯನ್ನು ಅತಿಕ್ರಮಣ ಮಾಡಿ ಅವರಣಗೋಡೆ ತೆರವುಮಾಡಿದ್ದಾರೆ ಅವರೆಲ್ಲರಿಗೂ ಒಂದೇ ರೀತಿಯಾಗಿ ಕಾನೂನು ಕ್ರಮಕೈಗೊಳ್ಳಿ ಎಂದು ಬಿಜೆಪಿಯವರು ಒತ್ತಾಯಿಸಿದರು.
ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಇದಕ್ಕೆ ನಮ್ಮ ವಿರೋಧ ವಿದೆ ಎಂದು ಹೇಳಿದಾಗ ಬಿಜೆಪಿ ಕಾಂಗ್ರೆಸ್ ಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು ಸಭೆ ವಿಷಯಾಂತರವಾಯಿತು. ಕೆಲಹೊತ್ತು ಗೊಂದಲದ ವಾತಾವರಣವೂ ನಿರ್ಮಾಣ ವಾಯಿತು.

ಅಂತಿಮವಾಗಿ ಭೂಮಾಪನ ಇಲಾಖೆಯಿಂದ ಗಡಿಗುರುತು ಮಾಡಿಸಿ ತಾ.ಪಂ.ನ ಜಾಗ ಅತಿಕ್ರಮಣ ಮಾಡಿದ್ದಾರೆ, ಅಂತವರೆಲ್ಲರಿಗೂ ತೆರವು ಗೊಳಿಸಲು ನೋಟಿಸ್ ಜಾರಿ ಮಾಡಿ ತೆರವು ಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆ ವಿಕೋಪಕ್ಕೆ ತಿರುಗಿದಾಗ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ತಾ.ಪಂ.ನ ಆಸ್ತಿಗೆ ಧಕ್ಕೆಯಾಗಿದ್ದರಿಂದ ಅತಿಕ್ರಮಣ ಮಾಡಿದ ಎಲ್ಲರಿಗೂ ಒಂದೇ ರೀತಿಯಲ್ಲಿ ಕಾನೂನು ಕ್ರಮತೆಗದುಕೊಳ್ಳುವ ಎಂದು ಸಭೆಗೆ ತಿಳಿಸಿದರು.
ಸಭೆಯ ಲ್ಲಿ ತಾ.ಪಂ.ಕಾರ್ಯನಿರ್ವಣಾಧಿಕಾರಿ ರಾಜಣ್ಣ.ತಹಶೀಲ್ದಾರ್ ರಶ್ಮಿ ಎಸ್.ಆರ್.ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಉಪಸ್ಥಿತರಿದ್ದರು. ತಾ.ಪಂ.ವಿಶೇಷ ಸಭೆಗೆ ಬಿಗಿ ಪೋಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here