ಮೌಖಿಕ ಇತಿಹಾಸವನ್ನು ತಳ್ಳಿಹಾಕುವಂತಿಲ್ಲ,ಹಿಂದಿನ ಕಾಲದಿಂದ ಬಂದ ಮೌಖಿಕ ಇತಿಹಾಸದ ದಾಖಲೀಕರಣ ಈ ಕಾಲದ ಅಗತ್ಯ ಮತ್ತು ಅನಿವಾರ್ಯ ಎಂದು ದೈಜಿವರ್ಲ್ಡ್ ನ ವ್ಯವಸ್ಥಾಪಕ ಪ್ರವೀಣ್ ತಾವ್ರೋ, ಅಭಿಪ್ರಾಯ ಪಟ್ಟರು.

ಅವರು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ (ರಿ) ಇದರ ವತಿಯಿಂದ ಕೇಂದ್ರದ ಸಭಾಭವನದಲ್ಲಿ ನಡೆದ ಮೌಖಿಕ ಇತಿಹಾಸ ದಾಖಲೀಕರಣ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ಒಲವು ತೋರಿಸುವ ತುಕಾರಾಂ ಪೂಜಾರಿ ಅವರ ಕಾರ್ಯ ಶ್ಲಾಘನೀಯ.
ಇತಿಹಾಸದ ಹಂಬಲ ಇರುವ ವ್ಯಕ್ತಿಗಳಿಗೆ ಮಾತ್ರ ಇಂತಹ ಕೇಂದ್ರದ ಮೂಲಕ ಸಾಧನೆ ಮಾಡಲು ಸಾಧ್ಯವಾಗುತ್ತದೆ.ಅದು ತುಕಾರಾಂ ಪೂಜಾರಿ ಅವರಿಂದ ಸಾಧ್ಯವಾಗಿದೆ.‌ಆ ಮೂಲಕ ಮುಂದಿನ ಪೀಳಿಗೆಗೆ ತುಳು ಬದುಕಿನ ಸಂಗ್ರಹ ಮಾಡಿದ ವಿಶೇಷ ಸಾಧನೆಗೆ ಸರಕಾರ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಅಳತೆ ಮತ್ತು ಮಾಪನ ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ ಗಜೇಂದ್ರ ಅವರು ಮಾತನಾಡಿ ಮೌಖಿಕ ಇತಿಹಾಸವನ್ನು ದಾಖಲೆ ಮಾಡುವುದರೊಂದಿಗೆ ಅದನ್ನು ಪುಸ್ತಕರೂಪದಲ್ಲಿ ಮುದ್ರಿಸಿ ಪ್ರತಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ನೀಡುವ ಕೆಲಸ ಅಗಬೇಕಾಗಿದೆ. ಮಾತ್ರವಲ್ಲ ತುಳು ನಾಡಿನ ಸಂಸ್ಕ್ರತಿ ಮತ್ತು ಪ್ರಾಚೀನ ಕಾಲದ ಆಚಾರವಿಚಾರಗಳು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಅಗಬೇಕಾಗಿದೆ ಎಂದರು.
ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ತುಳು ಅಧ್ಯಯನ ಕೇಂದ್ರ ದ ಅಧ್ಯಕ್ಷ ತುಕಾರಾಂ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ
ಕನ್ನಡ ಮತ್ತು ತುಳು ಭಾಷಾ ಸಾಂಸ್ಕೃತಿಕ ರಾಯಬಾರಿ ಯು.ಎ.ಇ. ಸರ್ವೋತ್ತಮ‌ಶೆಟ್ಟಿ, ಉಡುಪಿ ಜಿಲ್ಲಾ ಉಪನ್ಯಾಸ ಕ ವೇದಿಕೆಯ ಕಾರ್ಯದರ್ಶಿ ಪ್ರೋ.ಮರಿಯಾ ಜೆಸಿಂತಾ, ದ.ಕ.ಜಿಲ್ಲಾ ಇತಿಹಾಸ ಉಪನ್ಯಾಸ ಕರ ಸಂಘದ ಕಾರ್ಯದರ್ಶಿ ಪ್ರೋ.ಸಂತೋಷ್ ಬಿ. ಕಾಸರಗೋಡು ಜಿಲ್ಲಾ ಇತಿಹಾಸ ಉಪನ್ಯಾಸ ಕ ವೇದಿಕೆ ಯ ಸಂಚಾಲಕ ಪ್ರೋ.ರಾಜೇಂದ್ರ ರೈ
ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ದ ಬಗ್ಗೆ ಚಿಂತನೆ ಯ ಮಾತುಗಳನ್ನಾಡಿದರು. ಪ್ರೋ.ಆಶಾಲತಾ ಸುವರ್ಣ ಕಾರ್ಯಕ್ರಮ ಕ್ಕೆ ಸಹಕಾರ ನೀಡಿದರು.ಬಂಟ್ವಾಳ ಪ್ರಭಾರ ಪ್ರಾಂಶುಪಾಲ ವಿಲ್ಪ್ರೆಡ್ ಡಿ.ಸೋಜ, ಪ್ರಸ್ತಾವಿಸಿ ಸ್ವಾಗತಿಸಿದರು.ಉಪನ್ಯಾಸಕ ಶರತ್ ಆಳ್ವ ಪ್ರಾರ್ಥಿಸಿದರು.ಸಚೇತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ಬಾಲಕೃಷ್ಣ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here