ಬಂಟ್ವಾಳ: ದ.ಕ.ಮತ್ತು ಉಡುಪಿ ಜಿಲ್ಲೆಗಳ ಪಿಕಾಡ್೯ ಬ್ಯಾಂಕ್ ಗಳಿಗೆ 2019 ಎ.1 ರಿಂದ ಸೆಪ್ಟಂಬರ್  ಅಂತ್ಯದವರೆಗಿನ ಆರ್ಧ ವಷಾಂತ್ಯಕ್ಕೆ 2533.00 ಲಕ್ಷ ರೂ.ಸಾಲವನ್ನು ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನ ದ.ಕ.ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ನಿರ್ದೇಶಕ ಸುದರ್ಶನ್ ಜೈನ್ ತಿಳಿಸಿದ್ದಾರೆ. ಬುಧವಾರ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಾಗಿ 4087.18 ಲಕ್ಷ ಹಾಗೂ1394.19 ಲಕ್ಷ ರೂ.ವನ್ನು ಹಂಚಿಕೆ ಮಾಡಲಾಗಿದೆ ಎಂದರು. 2018-19  ಸಾಲಿನಲ್ಲಿ ಕಸ್ಕಾಡ್೯ ಬ್ಯಾಂಕ್ ಪ್ರಧಾನ ಕಚೇರಿಯಿಂದ ದ.ಕ.ಜಿಲ್ಲೆಯ ಬಂಟ್ವಾಳ ಪಿಕಾಡ್೯ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದರೆ,ಬೆಳ್ತಂಗಡಿ ಪಿಕಾಡ್೯ಬ್ಯಾಂಕ್ ದ್ವಿತೀಯ ಸ್ಥಾನದಲ್ಲಿದೆ ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಪಿಕಾಡ್೯ ಬ್ಯಾಂಕ್ ಪ್ರಥಮ,ಕಾರ್ಕಳ ಪಿಕಾಡ್ ೯ ಬ್ಯಾಂಕ್ ದ್ವಿತೀಯ ಸ್ಥಾನದಲ್ಲಿದೆ ಎಂದ ಅವರು ಎಲ್ಲಾ ಪಿಕಾಡ್ ೯ ಬ್ಯಾಂಕ್ ಗಳಿಂದ 4227.82 ಲಕ್ಷಗಳನ್ನು ಶಾಖಾ ಕಚೇರಿ ಮತ್ತು ಇನ್ನಿಯರ ಹಣಕಾಸು ಸಮನಸ್ಥೆಗಳಲ್ಲಿ ವಿನಿಯೋಗಿಸಲಾಗಿದೆ ಎಂದರು.ಉಭಯ ಜಿಲ್ಲೆಯ ಬೌಗೋಳಿಕ ಪ್ರದೇಶದ ಅವಶ್ಯಕತೆಗೆ ಅನುಗುಣವಾಗಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳನ್ನು ತಾಲೂಕಿನ ರೈತರಿಗೆ ಅವರ ಉದ್ದೇಶಕ್ಕನುಗುಣವಾಗಿ ಅಡಕೆ ತೋಟದ ಭೂ ಅಭಿವೃದ್ದಿ,ಅಡಕೆ ಕಣ,ತಂತಿಬೇಲಿ,ಬಾವಿಆಳ,ತುಂತುರು ನೀರಾವರಿ,ಹೈನುಗಾರಿಕೆ,ಕೋಳಿ,ಹಂದಿ ಸಾಕಣಿಕೆಯಂತಹ ಯೋಜನೆಯ ಜೊತೆಗೆ ಗ್ರಹ ನಿರ್ಮಾಣ,ಕೃಷಿಯೇತರ ಸಾಲಗಳನ್ನು ನೀಡಲಾಗುತ್ತಿದ್ದು,2018-19 ನೇ ಸಾಲಿನಲ್ಲಿ ನಬಾಡ್೯ ಪುನರ್ಧನದಡಿ 1321.00 ಲಕ್ಷ ರೂ.ಮತ್ತು ಸ್ವಂತ ಸಂಪನ್ಮೂಲದಡಿ ಠೇಣಿ ಸಂಗ್ರಹಿಸಲಾಗಿದೆ ಎಂದರು. ರಾಜ್ಯ ಸರಕಾರ ಕೃಷಿ ಮತ್ತು ಕೃಷಿ ಪೂರಕ ಸಾಲಗಳಿಗೆ ಶೇ. 3 ರಿಯಾಯಿತಿ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತಿದ್ದು, 2018-19 ರ ಸಾಲಿನಲ್ಲಿ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆ ಯೋಜನೆಗಳಲ್ಲಿ ದ.ಕ.ಜಿಲ್ಲೆಗೆ 314.72  ಲಕ್ಷ ರೂ.ಹಾಗೂ ಉಡುಪಿ ಜಿಲ್ಲೆಗೆ 20.41 ಲಕ್ಷ ಸೇರಿದಂತೆ ಒಟ್ಟು 335.13 ಲಕ್ಷ ರೂ.ಸಾಲ ವಿತರಿಸಲಾಗಿದ್ದು,ಈ ಯೋಜನೆಯಲ್ಲಿ ನಬಾಡ್೯ನಿಂದ 78.78 ಲಕ್ಷ ಸಹಾಯಧನ ದೊರೆಯಲಿದೆ ಎಂದು ವಿವರಿಸಿದರು. ರಾಜ್ಯ ಬ್ಯಾಂಕಿನ ಮೂಲಕ ಬರ,ಅತೀವೃಷ್ಠಿ ಹಾಗೂ ಅಡಕೆ ಕೊಳೆರೋಗ ಹಾಗೂ ತೊಇಟಗಾರಿಕಾ ಬೆಳೆಗಳ ಬೆಲೆ ಕುಸಿತದ ಹಿನ್ನಲೆಯಲ್ಲಿ ಪಿಕಾಡ್೯ ಬ್ಯಾಂಕ್ ಗಳ ದೀಘಾವಧಿ ಸಾಲದ ಕಂತುಗಳ ಅಸಲನ್ನು ಪಾವತಿಸಿರುವ ರೈತರಿಗೆ ಬಡ್ಡಿ ಮನ್ನಾ ಯೋಜನೆ ಮುಂದಿನ ಮಾಚ್೯ ಗೆ ಅಸಲು ಮುಂದೂಡಿಕೆಯೊಮನದಿಗೆ ಬಡ್ಡಿ ಮನ್ನಾ ಯೋಜನೆಯ ಪ್ರಸ್ತಾಪವನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದರು. ಕರ್ನಾಟಕ ರಾಜ್ಯ ಬ್ಯಾಂಕ್ ಹಾಗೂ ರಾಜ್ಯದ ಎಲ್ಲಾ  ಪಿಕಾಡ್ ೯ ಬ್ಯಾಂಕ್ ಗಳಿಗೆ ಏಕರೂಪದ ತಂತ್ರಾಂಶ ಅಳವಡಿಸಿ ಎಲ್ಲಾ ಬ್ಯಾಂಕಗಳನ್ನು ಸಂಪೂರ್ಣ ಗಣಕೀಕರಣಗೊಳಿಸುವುದು,ಮುಂದಿನ ವರ್ಷದಿಂದ ವರ್ಷಾರಂಭದಲ್ಲಿಯೇ ಕೃಷಿಕರಿಗೆ ಬೇಕಾದ ಆರ್ಥಿ ಹಂಚಿಕೆ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸುದರ್ಶನ್ ಜೈನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಬ್ಯಾಂಕಿನ ಶಾಖಾಧಿಕಾರಿ ಬಿ.ಜೆ.ಸುರೇಶ್,ಬಂಟ್ವಾಳ ಭೂ ಬ್ಯಾಂಕಿನ ವ್ಯವಸ್ಥಾಪಕ ಶೇಖರ ಎಂ.,ಉಪಾಧ್ಯಕ್ಷ ಸಂಜೀವ ಪೂಜಾರಿ,ನಿರ್ದೇಶಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here