ವಿಟ್ಲ: ವಿಠಲ ಪ್ರೌಢ ಶಾಲೆ ವಿಟ್ಲದಲ್ಲಿ ನಡೆದ ೨೦೧೯-೨೦ನೇ ಸಾಲಿನ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾಕೂಟದಲ್ಲ್ಲಿ ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಕೆ.ಎಸ್ ಸಾಕ್ಷತ್ ಶೆಟ್ಟಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ, ಅಬ್ದುಲ್ ಬಾಸಿತ್ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಯಾಸ್ಮಿನ್ ಚಕ್ರ ಎಸೆತ, ರಚನಾ 100 ಮೀ ಓಟ, ಅಮೃತವರ್ಷಿಣಿ ಎಮ್ ಅಡೆತಡೆ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಜ್ಞಾ ಪಿ ರೈ 400 ಮೀ ಓಟ, ರಚನಾ, ನಿಕ್ಷಿತಾ, ಪ್ರಜ್ಞಾ ಪಿ ರೈ, ಕುಸುಮ ರಿಲೇ, 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಚರಿತ್ರ್ 200 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.