ನಮ್ಮದೇಶದ ಸಂಸ್ಕೃತಿ ಆಧುನಿಕತೆಗೆ ಸೆರೆಯಾಗುತ್ತಿರುವ ಜೊತೆಗೆ ಅನಾರೋಗ್ಯಕರ ಭಾರತವಾಗುವುದಕ್ಕೆ ಹೊಸ್ತಿಲಲ್ಲಿ ನಿಂತಿದೆ.ಯೋಗ ಎಂಬುದು ಜ್ಞಾನ ಮಾರ್ಗಅಂತೆಯೇ ಮಾನಸಿಕ ಹಾಗೂ ದೈಹಿಕ ಪದ್ದತಿಯನ್ನುಒಟ್ಟುಗೂಡಿಸುವ ಪ್ರಮೇಯ ಪದ್ಧತಿಯಾಗಿದೆ. ಎಂದು ಸಂವಿತ್‌ನ ನಿರ್ದೇಶಕರಾಗಿರುವಡಾ| ಮಲ್ಲೇಪುರಂ ವೆಂಕಟೇಶ್‌ರವರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ವಿದ್ಯಾಭಾರತಿ ಹಾಗೂ ರಾಷ್ಟ್ರೋತ್ಥಾನದ ಸಂವಿತ್‌ನ 3 ದಿನದಜಿಲ್ಲಾ ಮಟ್ಟದಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವರವರುಯೋಗವು ಮಕ್ಕಳಲ್ಲಿ ಕಲಿಕೆಯಜೊತೆಗೆದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ, ಯೋಗಾಭ್ಯಾಸವು ಮಗುವಿನಲ್ಲಿ ಹೊಸ ಹೊಸ ಚಿಂತನೆಗಳನ್ನು ಬೆಳೆಸುತ್ತದೆ ಎಂದರು.
ವೇದಿಕೆಯಲ್ಲಿದ್ದ ಸಂವಿತ್‌ನ ಮುಖ್ಯವ್ಯವಸ್ಥಾಪಕರಾದ ವಸಂತ ಲಕ್ಷ್ಮಿಯವರುಯೋಗ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂವಿತ್‌ಯೋಗಅಧ್ಯಯನ ತಂಡದ ವ್ಯವಸ್ಥಾಪಕರಾದ ಮಂಜುನಾಥ್, ಸಂವಿತ್‌ನ ಯೋಗ ಅಧ್ಯಯನ ತಂಡದ ಮಾರ್ಗದರ್ಶಿಯಾಗಿರುವ ಸುಬ್ಬು,ಸಂವಿತ್‌ಜಿಲ್ಲಾ ಕಾರ್‍ಯದರ್ಶಿ ಹಾಗೂ ಶ್ರೀರಾಮ ವಿದ್ಯಾಕೇಂದ್ರದಯೋಗ ಶಿಕ್ಷಕರಾದ ಶ್ರೀ ಸಂಜಯ್ ಮತ್ತುಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದರವಿರಾಜ್‌ಕಣಂತೂರುಉಪಸ್ಥಿತರಿದ್ದರು. ವಿದ್ಯಾಭಾರತಿಯ ವಿವಿಧ ವಿದ್ಯಾಸಂಸ್ಥೆಗಳ ಯೋಗ ಶಿಕ್ಷಕರು ಭಾಗವಹಿಸಿದ್ದರು. ಕಾರ್‍ಯಕ್ರಮವನ್ನು ಸಂವಿತ್‌ನಯೋಗ ಸಂಶೋಧನಾತಂಡದ ವ್ಯವಸ್ಥಾಪಕರಾದ ಮಂಜುನಾಥ್‌ರವರು ಸ್ವಾಗತಿಸಿ ಸಂವಿತ್‌ನಯೋಗಅಧ್ಯಯನತಂಡದ ಸುಬ್ಬುರವರು ವಂದಿಸಿದರು.ಪ್ರೌಢಶಾಲಾಶಿಕ್ಷಕಿಯಾದ ಭಾಗ್ಯಶ್ರೀ ಬಿ.ಎಸ್. ಇವರುಕಾರ್‍ಯಕ್ರಮವನ್ನು ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here