ಬಂಟ್ವಾಳ: ಹಳೆಯ ಕಾಲದ ಅಂಗನವಾಡಿ ಕೇಂದ್ರ ವೊಂದು ಕುಸಿದು ಬಿದ್ದು ಮಕ್ಕಳು ಪ್ರಾಣಾಪಯದಿಂದ ಪಾರಾದ ಘಟನೆ ಸಂಗಬೆಟ್ಟು ಎಂಬಲ್ಲಿ ನಡೆದಿದೆ.
ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಪೆ ಕರ್ಪೆ ಗ್ರಾಮದ ಕರ್ಪೆ ಅಂಚೆಕಚೇರಿಯಲ್ಲಿ ಕಾರ್ಯನುರ್ವಹಿಸುತ್ತಿರುವ ಅಂಗನವಾಡಿ ಕೇಂದ್ರ ಇಂದು ಬೆಳಿಗ್ಗೆ ಸುಮಾರು 10.30 ರ ವೇಳೆ ಒಂದು ಭಾಗ ಕುಸಿದು ಬಿದ್ದಿದೆ.
ಸುಮಾರು 28 ವರ್ಷಗಳ ಕಾಲ ಹಳೆಯದಾದ ಹಂಚಿನ ಛಾವಣಿಯ ಅಂಗನವಾಡಿ ಕೇಂದ್ರ ತನ್ನ ಅಯುಷ್ಯ ಕಳೆದುಕೊಂಡು ಮುರಿದು ಬಿದ್ದಿದೆ.
ಈ ಘಟನೆಯ ವೇಳೆ ಅಂಗನವಾಡಿ ಕೇಂದ್ರ ದಲ್ಲಿ 25 ಪುಟಾಣಿ ಗಳಿದ್ದರು.
ಅಂಗನವಾಡಿ ಕೇಂದ್ರ ದ ಹಂಚು ಬಿದ್ದ ಸದ್ದು ಕೇಳಿದಾಗ ಮಕ್ಕಳು ಹೆದರಿ ಹೊರಗೆ ಓಡಿ ಹೋಗಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಅಂಗನವಾಡಿ ಕೇಂದ್ರ ರಿಪೇರಿ ಅಗುವವರೆಗೆ ಬದಲಿ ವ್ಯವಸ್ಥೆ ಮಾಡುವಂತೆ ಸ್ಥಳಕ್ಕೆ ಭೇಟಿ ನೀಡಿ ದ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ.ಸದಸ್ಯ ದೇವಪ್ಪ ಕರ್ಕೇರ ಮತ್ತಿತರರು ಬೇಟಿ ನೀಡಿದ್ದಾರೆ.