Sunday, October 22, 2023

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾಲೋಚನಾ ಸಭೆ

Must read

ಮಾಣಿ: ಸಾಹಿತ್ಯ ಸಮ್ಮೇಳನ ಜಾತ್ರೆಯ ಮಾದರಿಯಲ್ಲಿ ಸಂಘಟಿತ ಆಗಬೇಕು. ಆ ದೃಷ್ಟಿಯಲ್ಲಿ ನಮ್ಮ ಪ್ರಯತ್ನ ನಡೆಯುವುದು. ಮಾಣಿ ಆಸುಪಾಸಿನ ಹನ್ನೊಂದು ಗ್ರಾಮಗಳ ಎಲ್ಲ ಸಾಹಿತ್ಯ ಪ್ರೀಯರು ಒಂದಾಗಿ ಪೂರ್ವ ಸಿದ್ದತೆಯ ಕೆಲಸಗಳು ನಡೆಯಬೇಕು. ಜನತೆಯ ಮೇಲಿರುವ ವಿಶ್ವಾಸದಿಂದ ನಾವು ಸಮ್ಮೇಳನದ ವೀಳ್ಯ ಸ್ವೀಕರಿಸಿದ್ದೇವೆ. ಅದನ್ನು ಯಶಸ್ವಿಗೊಳಿಸುವಲ್ಲಿ ಶಕ್ತಿ ಮೀರಿ ದುಡಿಯುವ ಬದ್ದತೆ ನಮ್ಮದಾಗಿದೆ ತಂದು ಬಂಟ್ವಾಳ ತಾಲೂಕು ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜಡ್ತಿಲ ಹೇಳಿದರು.
ಅವರು ಅ. 26ರಂದು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.
ಆರಂಭದಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಮ್ಮೇಳನ ನಡೆಸಬಹುದೇ ಎಂಬ ಸಂಶಯ ಕಾಡಿತ್ತು. ಭಾಷೆ ಅಧ್ಯಯನದ ವಿಚಾರದಲ್ಲಿ ತಾರತಮ್ಯ ಇಲ್ಲ ಎಂದು ಕಸಾಪ ಮುಖ್ಯಸ್ಥರು ಭರವಸೆ ನೀಡಿದ್ದಾರೆ. ಕನ್ನಡ ನಮ್ಮ ನಾಡ ಭಾಷೆ. ತುಳು ಮಾತೃ ಭಾಷೆ ಹಾಗಾಗಿ ನಮಗೆ ಎಲ್ಲರ ಸಹಭಾಗಿತ್ವ ಬೇಕು. ನಮ್ಮದು ಐಕ್ಯಮತ್ಯದ ಕಾರ್ಯಕ್ರಮ ಎಂದರು.
ಸಮ್ಮೇಳನದ ವೇದಿಕೆ, ಸಭಾಂಗಣ ಮತ್ತು ಮುಖ್ಯದ್ವಾರದ ದಾನಿಗಳನ್ನು ಗುರುತಿಸಲಾಗಿದೆ. ಹೆಚ್ಚಿನ ಅಪೇಕ್ಷೆಯ ಬಗ್ಗೆ ಮುಂದೆ ಪರಿಶೀಲಿಸೋಣ ಎಂದು ಅಭಿಪ್ರಾಯ ನೀಡಿದರು.
ಹೊಣೆಗಾರಿಕೆ ಕೆಲಸ
ಜಿ.ಪಂ.ಸದಸ್ಯೆ ಮಂಜಳಾ ಮಾವೆ ಮಾತನಾಡಿ ಸಮ್ಮೇಳನದ ಆರ್ಥಿಕ ವೆಚ್ಚ, ಯಶಸ್ಸು ನಮ್ಮ ದುಡಿದಲ್ಲಿದೆ. ನಾವು ಹೊಣೆಗಾರರಾಗಿ ಕೆಲಸ ಮಾಡಬೇಕು. ನಿಮ್ಮ ಜೊತೆಗೆ ನಾನಿದ್ದೇನೆ. ಮಾಣಿಯಲ್ಲಿ ಇಂತಹ ಕಾರ್ಯಕ್ರಮ ಇದೇ ಪ್ರಥಮವಾಗಿ ನಡೆಯುತ್ತಿದೆ. ಎಲ್ಲರ ಸಹಭಾಗಿತ್ವವನ್ನು ಪಡೆಯುವ ಎಂದು ಭರವಸೆ ವ್ಯಕ್ತ ಮಾಡಿದರು.
ಅಧ್ಯಕ್ಷರ ಆಯ್ಕೆ
ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್ ಮಾತನಾಡಿ ಕಳೆದ ವರ್ಷ ಫರಂಗಿಪೇಟೆಯಲ್ಲಿ ಕೃಷ್ಣಕುಮಾರ್ ಪೂಂಜ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಮಾಣಿಯಲ್ಲಿ ಮುಂದಿನ ಸಮ್ಮೇಳನ ನಡೆಸುವ ವೀಳ್ಯ ಸ್ವೀಕರಿಸಿದಂತೆ ಕಾರ್ಯಕ್ರಮಕ್ಕೆ ಸಮಾಲೋಚನೆ ನಡೆಸುವುದಾಗಿದೆ. ಮುಂದಿನ ಸಮ್ಮೇಳನ ವಾಮದಪದವಿನಲ್ಲಿ ನಡೆಯಲಿದೆ ಎಂದರು.
ಮಾಣಿಯಲ್ಲಿ ನಡೆಯುವ ಬಂಟ್ವಾಳ ತಾಲೂಕು ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರಾಗಬಹುದು ಎಂಬ ಅಭಿಪ್ರಾಯವನ್ನು ಕೇಳಿದಾಗ, ಸ್ಥಳೀಯರಿಂದ ಬಂದ ಸೂಚನೆಯಂತೆ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯ ಡಾ. ಧರಣಿದೇವಿ ಮಾಲಗತ್ತಿ ಅವರು ಸಮ್ಮೇಳನ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅನುಮತಿಯಂತೆ ಹೆಸರನ್ನು ಘೋಷಿಸುತ್ತಿರುವುದಾಗಿ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸಮ್ಮಾನಿಸುವುದು. ಕೃಷಿ ಕ್ಷೇತ್ರಕ್ಕೆ ಪೂರಕ ಗೋಷ್ಠಿ ನಡೆಸುವುದು, ಮಾಣಿ ಎಂದಾಕ್ಷಣ ಯಕ್ಷಗಾನದ ನೆನಪು ಬರುತ್ತದೆ ಹಾಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಗೋಷ್ಠಿ ಒಂದನ್ನು ನಡೆಸುವ ಎಂಬಿತ್ಯಾದಿ ಅಭಿಪ್ರಾಯಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಿಗೆ ಕನ್ನಡದ ಶಾಲನ್ನು ಹೊದಿಸಿ ಗೌರವಪೂರ್ವಕ ಅವರಿಗೆ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಮರ್ಯಾದೆ ಸಲ್ಲಿಸಿದರು.
ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಶುಭ ಹಾರೈಸಿದರು.
ಸಜ್ಜಾಗಬೇಕು
ಕಳೆದ ಅವಽಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ಗಂಗಾಧರ ಆಳ್ವ ಮಾತನಾಡಿ, ಸಮ್ಮೇಳನ ಮೆರವಣಿಗೆ, ವಿವಿಧ ಗೋಷ್ಠಿಗಳು, ಜನರ ಸಹಭಾಗಿತ್ವದ ಬಗ್ಗೆ ಸಮರ್ಪಕ ವ್ಯವಸ್ಥೆಗಳನ್ನು ಹಮ್ಮಿಕೊಂಡು ಈ ಹಿಂದೆ ಇಂತಹ ಮಾದರಿ ಕಾರ್ಯಕ್ರಮ ಆಗಿಲ್ಲ ಎಂಬ ರೀತಿಯಲ್ಲಿ ನಿರ್ವಹಿಸಬೇಕು. ಕಳೆದ ಸಲ ಸುಮಾರು ೪.೫೦ಲಕ್ಷ ರೂ. ವೆಚ್ಚವಾಗಿದ್ದು ಆರ್ಥಿಕ ಸಮಿತಿಯ ಸಜ್ಜಾಗಬೇಕು ಎಂದರು.
ಮಾಣಿಯಲ್ಲಿ ಸಾಹಿತ್ಯ ಪ್ರೀಯರನ್ನು, ಪ್ರೇಕ್ಷಕರನ್ನು ಸೇರಿಸುವುದು ದೊಡ್ಡ ಸಮಸ್ಯೆಯಾಗದು. ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದಕ್ಕಾಗಿ ಅವರಿಗೆ ಪ್ರತ್ಯೇಕ ಕಾರ್ಯಚಟುವಟಿಕೆ , ಸ್ಪರ್ಧೆ ಹಮ್ಮಿಕೊಳ್ಳಬೇಕು ಎಂಬ ಸೂಚನೆ ನೀಡಿದರು.
ಊಟೋಪಚಾರ, ಆರ್ಥಿಕ ವೆಚ್ಚ, ಮೆರವಣಿಗೆ ಗೌಜಿಯು ಒಂದು ಸಮ್ಮೇಳನದಿಂದ ಮತ್ತೊಂದು ಸಮ್ಮೇಳನಕ್ಕೆ ಪೈಪೋಟಿ ಕ್ರಮಕ್ಕೆ ಪ್ರೇರಣೆ ನೀಡದಂತೆ ಜಾಗೃತೆ ಮಾಡಬೇಕು. ಹಿರಿಯ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಬಳಸಿಕೊಂಡಾಗ ಕೆಲಸ ಸುಲಭ ಆಗುವುದು. ಮೆರವಣಿಗೆಯಲ್ಲಿ ಹೊಸತನವನ್ನು ತರುವ, ಆಕರ್ಷಣೆ ಬೇಕು. ಅನಾವಶ್ಯಕ ವಿಜೃಂಭಣೆ ಅವಶ್ಯವಲ್ಲ ಎಂದು ಸಲಹೆ ನೀಡಿದರು.
ಸಮಿತಿ ಕೋಶಾಽಕಾರಿ ಜಗನ್ನಾಥ ಚೌಟ, ಕಾರ್ಯದರ್ಶಿ ಶ್ರೀಧರ್ ಸಿ., ಕಸಾಪ ಕಾರ್ಯದರ್ಶಿ ನಾಗವೇಣಿ ಮಂಚಿ, ಬಂಟ್ವಾಳ ತಾಲೂಕು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಗ್ರಾ.ಪಂ. ಅಧ್ಯಕ್ಷೆ ಮಮತಾ ಶೆಟ್ಟಿ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮಾಣಿ, ಸಚಿನ್ ರೈ ಮಾಣಿಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಬ್ರಾಹಿಂ ಕೆ. ಮಾಣಿ, ಮೋಹನ್ ಪಿ.ಎಸ್., ಶ್ರೀಧರ ಗೌಡ, ಡಾ| ಮನೋಹರ ರೈ , ಗಿರಿಯಪ್ಪ ಗೌಡ, ಪೂವಪ್ಪ ನೇರಳಕಟ್ಟೆ, ಡಾ| ಶ್ರೀನಾಥ್ ಆಳ್ವ, ಪುಷ್ಪರಾಜ ಹೆಗ್ಡೆ, ತಾರಾನಾಥ ಶೆಟ್ಟಿ, ಅಮಿತ್ ಕುಮಾರ್ ಜೈನ್, ಜಯಂತಿ ಪೂಜಾರಿ, ಸುದೀಪ್ ಕುಮಾರ್ ಶೆಟ್ಟಿ, ಉಮೇಶ ಬರಿಮಾರು, ಜನಾರ್ದನ ಪೆರಾಜೆ, ಕುಶಲ ಎಂ. ಪೆರಾಜೆ ಮತ್ತು ಇತರರು ವಿವಿಧ ಸಲಹೆಗಳನ್ನು ನೀಡಿದರು.
ಕಸಾಪ ಅಧ್ಯಕ್ಷರು ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ ವಂದಿಸಿದರು. ಸ್ವಾಗತ ಸಮಿತಿ ಜೊತೆ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.

More articles

Latest article