ಬಂಟ್ವಾಳ: ಬಂಟ್ವಾಳ ತಾಲೂಕು ಸ್ರ್ತಿಶಕ್ತಿ ಒಕ್ಕೂಟ (ರಿ.) , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ 2018-19 ಸಾಲಿನ ವಾರ್ಷಿಕ ಮಹಾಸಭೆ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮ ಕ್ರಮವನ್ನು ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಡೈಸಿ ವರ್ಗೀಸ್ ದೀಪ ಬೆಳಗಿಸಿ ಉದ್ಘಾಟಿಸಿ ದರು.
ಬಳಿಕ ಮಾತನಾಡಿದ ಅವರು ಮಹಿಳೆಯರ ಶಕ್ತಿ , ಸಾಮರ್ಥ್ಯ ವನ್ನು ಸಂಘಟನೆ ಯ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು. ಅಭಿಪ್ರಾಯ ವ್ಯತ್ಯಾಸಗಳು ಎಲ್ಲಿಯೂ ಇರುತ್ತದೆ, ಹೊಂದಾಣಿಕೆಯಿಂದ ಕೆಲಸ ಮಾಡಿ ಎಂದು ಅವರು ಹೇಳಿದರು. ‌
ಪ್ರೀತಿ ವಿಶ್ವಾಸ ಒಗ್ಗಟ್ಟಿನ , ಸಮಯ ಪಾಲನೆಯ ಮೂಲಕ ಸಂಘಟನೆ ಬೆಳೆಸಲು ತಿಳಿಸಿದರು.
ಸ್ತ್ರೀ ಶಕ್ತಿ ಸಂಘಟನೆ ಇತರ ಜಿಲ್ಲೆಯ ಸಂಘಟನೆ ಗಳಿಗೆ ಮಾದರಿಯಾಗುವ ರೀತಿಯಲ್ಲಿ ಸಾಮಾರ್ಥ್ಯ ದ ಮೂಲಕ ಸಂಘಟನೆ ಪ್ರಬಲವಾಗಿ ಬೆಳೆಯಬೇಕು.

ನಾವು ಬದುಕಿರುವವರೆಗೆ ಸ್ತ್ರೀ ಶಕ್ತಿ ಸಂಘ, ಸಂಘಟನೆ ಪ್ರಾಮುಖ್ಯ ಎಂದು ಅವರು ಹೇಳಿದರು. ವಿಟ್ಲ ಸಿಡಿಪಿಒ ಸುಧಾಜೋಶಿ,
ಮಾತನಾಡಿ ದ.ಕ.ಜಿಲ್ಲೆಯ ಎಲ್ಲಾ ಬ್ಲಾಕ್ ಸೊಸೈಟಿ ಗಳು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರು, ಹೀಗಾಗಿ ಅಂತಹ ಚಟುವಟಿಕೆಗಳ ಮೂಲಕ ಸಂಘಟಿತರಾಗಿರುವ ಬಂಟ್ವಾಳ ಒಕ್ಕೂಟ ಜವಬ್ದಾರಿಯಿಂದ ಹೆಜ್ಜೆ ಇಡಬೇಕು ಎಂದು ಅವರು ಹೇಳಿದರು. ದಕ್ಷತೆಯಿಂದ ಕಾರ್ಯಚಟುವಟಿಕೆಗಳನ್ನು ಮಾಡುವಂತೆ ಅವರು ತಿಳಿಸಿದರು.

ಬಂಟ್ವಾಳ ಸಿ‌.ಡಿ.ಪಿ.ಒ ಶ್ರೀಲತಾ,ಮಾತನಾಡಿ ಸಿಡಿಪಿಒ ಇಲಾಖೆಯ ಸಂಪೂರ್ಣ ಸಹಕಾರ ಒಕ್ಕೂಟದ ಕಾರ್ಯಚಟುವಟಿಕೆಗಳಿಗೆ ಇದೆ. ಉತ್ತಮ ರೀತಿಯಲ್ಲಿ ಸಂಘಟನೆ ಯನ್ನು ಮುಂದುವರಿಸಿಕೊಂಡು ಹೋಗುವಂತೆಯೂ ಅವರು ತಿಳಿಸಿದರು. ಒಕ್ಕೂಟದ ಜತೆ ಇನ್ನಿತರ ಸಮಸ್ಯೆ ಗಳು ಬಂದರೆ ಇಲಾಖೆ ಯ ಸಹಕಾರ ಪಡೆದುಕೊಳ್ಳಲು ಅವಕಾಶ ಇದೆ ಎಂದು ಅವರು ಹೇಳಿದರು.
ಒಕ್ಕೂಟದ ಅಧ್ಯಕ್ಷೆ ರೇವತಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಬೇಬಿ, ಕಾರ್ಯದರ್ಶಿ ಪುಷ್ಪಲತಾ, ಕೋಶಾಧಿಕಾರಿ ಯಶೋಧ, ಸದಸ್ಯರಾದ ಪರಿದಾಭಾನು, ಸುನಂದ, ವಿಶಾಲಾಕ್ಷಿ, ನಾಗರತ್ನ, ಲಕ್ಮೀ,
ಕಾರ್ಯಕ್ರಮದ ಸಂಘಟಕಿ ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಹಿರಿಯ ಮೇಲ್ವಿಚಾರಕಿ ಭಾರತಿಕುಂದರ್, ಮೇಲ್ವಿಚಾರಕಿ ಯರಾದ ಸಿಂದು, ಶಾಲಿನಿ, ಸುಜಾತ, ಗುಣವತಿ, ರೂಪಕಲಾ, ಸವಿತಾನವೀನ್ ಲೋಲಾಕ್ಷಿ, ರೋಹಿಣಿ, ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಎಲ್.ಸಿ.ಪಿಯುಸಿ, ಡಿಗ್ರಿ ಹಾಗೂ ಡಿಪ್ಲೋಮಾ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ಒಕ್ಕೂಟದ ಸದಸ್ಯರ ಮಕ್ಕಳಿಗೆ
ಪ್ರೋತ್ಸಾಹ ಧನ ನೀಡಲಾಯಿತು. ‌
ಒಕ್ಕೂಟದ ಸದಸ್ಯ ರಿಗೆ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
ಅಧ್ಯಕ್ಷೆ ರೇವತಿ ವರದಿವಾಚಿಸಿದರು.‌
ಒಕ್ಕೂಟದ ಕೋಶಾಧಿಕಾರಿ ಸ್ವಾಗತಿಸಿ , ಸದಸ್ಯೆ ಲಕ್ಷ್ಮಿ ವಂದಿಸಿದರು. ಕಾರ್ಯದರ್ಶಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here