ಬಂಟ್ವಾಳ: ಸ್ಯಾಕ್ಸೋಪೋನ್ ಚಕ್ರವರ್ತಿ ಅವರಿಗೆ ಶೃದ್ದಾಂಜಲಿ ಸಭೆ ನಾಳೆ ಸಜೀಪದಲ್ಲಿ ನಡೆಯಲಿದೆ. ಜಗತ್ತ್ ಪ್ರಸಿದ್ಧ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃರಿತ ,ಡಾ| ಕದ್ರಿ ಗೋಪಾಲನಾಥ್ ಅವರಿಗೆ ಶ್ರದ್ಧಾಂಜಲಿ ಸಭೆ ಆ. 16 ಬುಧವಾರ ಸಮಯ ಸಂಜೆ 4:00 ಕ್ಕೆ ಸಜೀಪ ಮೂಡ
ಸರಕಾರಿ ಹಿರಿಯ ಪಾಥಮಿಕ ಶಾಲೆ,ಸುಭಾಷ್ ನಗರ, ಇಲ್ಲಿ ನಡೆಯಲಿದೆ. ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ  ಬಿ.ಸದಾನಂದ ಪೂಂಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳು,ನಾಗರೀಕರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಶೃಂದ್ದಾಜಂಲಿ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಿದ್ದಾರೆ.

ಡಾಕ್ಟರೇಟ್ ಕದ್ರಿ ಗೋಪಾಲನಾಥ್ ರವರು 1950ರ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಜನಿಸಿದರು.

ಕರಾವಳಿಯ ಹೆಸರನ್ನು ಜಗತ್ತಿಗೆ ಪರಿಚಯಿಸಿದ ಸಜೀಪದ ಅಮೂಲ್ಯ ಸೊತ್ತು. ಹಾಗಾಗಿ ಹುಟ್ಟೂರಿನಲ್ಲಿ ನಾಳೆ ಅವರ ಶೃದ್ದಾಂಜಲಿ ಸಭೆ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಜಿ.ಪಂ.ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here