ಬಂಟ್ವಾಳ : ಎನ್.ಎಸ್.ಎಸ್ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಮೈಗೂಡಿಸಕೊಳ್ಳುವುದರಿಂದ ಅವರು ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ಕೊಡಲು ಸಾಧ್ಯವಾಗುತ್ತದೆ. ಏಳು ದಿವಸಗಳ ತಮ್ಮ ತಮ್ಮ ಮನೆಯನ್ನು ಬಿಟ್ಟು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ, ಪರಸ್ಪರ ಸಹಾಯ ಮಾಡುವ ಮನೋಭಾವ ಅವರಲ್ಲಿ ಬೆಳೆಯುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಸರಕಾರಿ ಪ್ರೌಢಶಾಲೆ ವಗ್ಗದಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಕಲಿಸುತ್ತದೆ. ಪುಸ್ತಕದ ಪಾಠದ ಜೊತೆಗೆ ಇಂತಹ ಬದುಕಿನ ಪಾಠಗಳು ಕೂಡಾ ತುಂಬಾ ಅಗತ್ಯ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಿರುತ್ತದೆ ಎಂದರು.
ಸಮಾರೋಪ ಭಾಷಣವನ್ನು ಮಾಡಿದ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ| ಪಾಂಡುರಂಗ ನಾಯಕ್ ಎನ್.ಎಸ್.ಎಸ್. ಶಿಬಿರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವನ್ನು ಮಾಡುತ್ತದೆ. ಮುಂದೆ ಒಬ್ಬ ಉತ್ತಮ ನಾಯಕನಾಗಲು ಅದು ಪ್ರೇರಣೆ ನೀಡುತ್ತದೆ ಎಂದರು. ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು.
ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ.ಜಿನರಾಜ ಆರಿಗ, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಬಂಟ್ವಾಳ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾವಳಪಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಕರ್ಣ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪುತ್ತೂರಿನ ಸಹಾಯಕ ಪ್ರಾಧ್ಯಾಪಕ ಪ್ರವೀಣ್, ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ, ಸರಕಾರಿ ಪದವಿಪೂರ್ವ ಕಾಲೇಜು ವಗ್ಗದ ಇತಿಹಾಸ ಉಪನ್ಯಾಸಕ ವಿಲ್‌ಫ್ರೆಡ್ ಪ್ರಕಾಶ್ ಡಿಸೋಜ ಪ್ರಭು, ಸರಕಾರಿ ಪ್ರೌಢಶಾಲೆ ವಗ್ಗದ ಮುಖ್ಯೋಪಾಧ್ಯಾಯ ಶೇಖ್ ಆದಂ ಸಾಹೇಬ್, ಎನ್.ಎಸ್.ಎಸ್ ಘಟಕ ನಾಯಕ ವೈಶಾಖ್ ಹಾಗೂ ಘಟಕ ನಾಯಕಿ ಶ್ರೀಜಾ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಸ್ವಯಂಸೇವಕಿ ವಿದ್ಯಾಶ್ರೀ ಪ್ರಾರ್ಥಿಸಿದರು. ಉಪನ್ಯಾಸಕಿ ಸಂಧ್ಯಾ ಸ್ವಾಗತಿಸಿ, ಶಿಬಿರಾಧಿಕಾರಿ ಕವಿತಾ ಯಾದವ್ ಧನ್ಯವಾದ ಅರ್ಪಿಸಿದರು. ಸಹಶಿಬಿರಾಧಿಕಾರಿ ತೇಜಸ್ವಿ ಬಹುಮಾನಪಟ್ಟಿಯನ್ನು ವಾಚಿಸಿದರು. ಸಹಶಿಬಿರಾಧಿಕಾರಿ ಮನೋಹರ ಶಾಂತಪ್ಪ ದೊಡ್ಡಮನಿ ನಿರೂಪಿಸಿದರು.
ಸಹಶಿಬಿರಾಧಿಕಾರಿಗಳಾದ ಮಹಿಮಾ ಸಿ., ಅಪರ್ಣಾ, ಸುದರ್ಶನ್ ಬಿ., ಶಾಲಿನಿ ಬಿ., ವಿನಯಾ ಬಿ. ಹಾಗೂ ಉಪನ್ಯಾಸಕರಾದ ಭಾರತಿ ಪಿ., ಚೇತನ್ ಮುಂಡಾಜೆ, ಶಿವಪ್ರಸಾದ್, ಸುಪ್ರಿಯಾ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here