ಬಂಟ್ವಾಳ: ತುಳು ನಾಡಿನ ಮೂಲ ಸಂಸ್ಕೃತಿಯಾದ ಕೃಷಿ ಸಂಸ್ಕೃತಿಗೆ ಪ್ರಾಧಾನ್ಯತೆ ನೀಡುವ ಕೆಸರುಗದ್ದೆ ಕ್ರೀಡಾ ಕೂಟ ನಡೆಸುತ್ತಿರುವುದು ಉತ್ತಮ ಕಾರ್ಯಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹೇಳಿದರು.
ಬಂಟ್ವಾಳ ತಾ. ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿಯ ಬೆಳ್ಳಿಹಬ್ಬದ ಪ್ರಯುಕ್ತ ಮೂಡುಪಡುಕೋಡಿ ಸಿರಿಗುಂಡದಪಾಡಿ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಬಳಿಯ ಗದ್ದೆಯಲ್ಲಿ ರವಿವಾರ ನಡೆದ ಕೆಸರ್‌ಡ್ ಒಂಜಿ ದಿನ, ವಿವಿಧ ಆಟೋಟ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಳ್ಳಿ ಹಬ್ಬದ ಆಚರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯನ್ನು ವೈಭವೀಕರಿಸುತ್ತಿರುವ ಸಮಿತಿಯ ಕಾರ್ಯ ಅರ್ಥಪೂರ್ಣವಾಗಿದ್ದು, ಸಮಿತಿ ಅಭಿನಂದನೀಯರು ಎಂದು ಹೇಳಿದರು.

ವೇ. ಮೂ. ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಉತ್ತಮ ಕಾರ್ಯಗಳಿಗೆ ದೇವರ ಅನುಗ್ರಹವಿರುವುದು. ಸಮಾಜಮುಖಿ ಕಾರ್ಯಗಳನ್ನು ನಡೆಸಿದಾಗ ಜೀವನ ಸಾರ್ಥಕವಾಗುವುದು ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗುವುದು. ಯುವ ಜನತೆ ಕೃಷಿ ಆಧಾರಿತ ಉದ್ಯೋಗದಲ್ಲಿ ಆಸಕ್ತಿ ವಹಿಸಿ ತೊಡಗಿಸಿಕೊಂಡು ಅಭಿವೃದ್ಧಿ ಹೊಂದಬಹುದು ಎಂದರು.
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ ಬಿ.ಸಿ.ರೋಡ್, ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು, ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪ್ರ.ಅರ್ಚಕ ಗೋಪಾಲಕೃಷ್ಣ ಭಟ್ ಸನಂಗುಳಿ ಅವರು ಶುಭ ಹಾರೈಸಿದರು. ಬಂಟ್ವಾಳ ಪುರಸಭಾ ಮಾಜಿ ಸದಸ್ಯ ದೇವದಾಸ ಶೆಟ್ಟಿ, ಸಿರಿಗುಂಡಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಶೆಟ್ಟಿ ನರ್ವಲ್ದಡ್ಡ, ಉದ್ಯಮಿಗಳಾದ ಭೋಜರಾಜ ಶೆಟ್ಟಿ ಕೊರಗಟ್ಟೆ, ಗೋಪಾಲಕೃಷ್ಣ ಪೂಜಾರಿ ಪುಂಜಾಲಕಟ್ಟೆ, ಪ್ರವೀಣ್ ಶೆಟ್ಟಿ ಅಂಕದಳ, ಜನತಾ ಬಜಾರ್ ನಿರ್ದೇಶಕ ಪುರುಷೋತ್ತಮ ಶೆಟ್ಟಿ ವಾಮದಪದವು, ಸಮಿತಿ ಗೌರವಾಧ್ಯಕ್ಷ ಗಂಗಾಧರ ಶೆಟ್ಟಿ ಅರ್ಕೆದೊಟ್ಟು, ಸಂಚಾಲಕ ಡಾ. ರಾಮಕೃಷ್ಣ ಎಸ್., ಪದಾಧಿಕಾರಿಗಳಾದ ಪ್ರಭಾಕರ ಪ್ರಭು,ಸಂತೋಷ್ ಕುಮಾರ್ ಶೆಟ್ಟಿ ಕುಂಟಜಾಲು, ಪ್ರಶಾಂತ್ ದೇವಾಡಿಗ, ಮೂಡುಪಡುಕೋಡಿ ಹಿ.ಪ್ರಾ.ಶಾಲಾ ಶಿಕ್ಷಕ ಸುನಿಲ್ ಸಿಕ್ವೆರಾ, ಇರ್ವತ್ತೂರು ಶ್ರೀ ಲಕ್ಷ್ಮಿ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ವಸಂತಿ ಭಟ್ ಜಿ.ಕೆ., ಅಧ್ಯಕ್ಷೆ ಶಶಿಕಲಾ ಉಡುಪ, ಕಾರ್ಯದರ್ಶಿ ಸಂಧ್ಯಾ ಕೋರ್ನಾಯ, ಗ್ರಾ.ಪಂ.ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಸಕರನ್ನು ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.
ಗ್ರಾ.ಪಂ. ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್ ಸ್ವಾಗತಿಸಿದರು. ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ ಅವರು ಪ್ರಸ್ತಾವಿಸಿದರು. ಸಮಿತಿ ಉಪಾಧ್ಯಕ್ಷ ದಯಾನಂದ ಎಸ್. ಎರ್ಮೆನಾಡು ವಂದಿಸಿದರು. ಕಾರ್ಯದರ್ಶಿ ಬೂಬ ಕುದ್ಕಂದೋಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಗ್ಗ ಜಗ್ಗಾಟ, ವಾಲಿಬಾಲ್, ಕಬಡ್ಡಿ ಹಾಗೂ ಆಟೋಟ ಸ್ಪರ್ಧೆಗಳು ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here