ಬಂಟ್ವಾಳ: ವಾಯುಮಂಡಲದಲ್ಲಾಗುವ ನಿರಂತರ ಬದಲಾವಣೆಗಳು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯಲ್ಲಿರುವ ಜೀವ ಸಂಕುಲಗಳು ಅದರ ಪರಿಣಾಮವನ್ನು ನಿರಂತರ ಅನುಭವಿಸಬೇಕಾಗುತ್ತದೆ. ಓಝೋನ್ ಪದರ ಮೇಲೆ ಮಾನವನ ನಿರಂತರ ಚಟುವಟಿಕೆಗಳು ಪ್ರಭಾವ ಬೀರುತ್ತವೆ. ಭೂಮಿಯಲ್ಲಿ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಇಲ್ಲಿನ ಜೀವ ಸಂತತಿ ಬದುಕಬಲ್ಲದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಛೇರಿಯ ಹಿರಿಯ ಸೈಂಟಿಫಿಕ್ ಆಫೀಸರ್ ಜಯಪ್ರಕಾಶ್ ಎಸ್ ನಾಯಕ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳಿಗಾಗಿ ನಡೆದ ವಿಶ್ವ ಓಜೋನ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಓಝೋನ್ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿ ವರ್ಷವು ಓಝೋನ್ ದಿನಾಚರಣೆಯನ್ನು ಒಂದೊಂದು ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಓಝೋನ್ ಆಮ್ಲಜನಕದ ಮೂರು ಅಣುವಿನಿಂದ ಆಗಿರುತ್ತದೆ. ಈ ಓಝೋನ್ ಪದರವು ಸೂರ್ಯನಿಂದ ಬರುವ ನೇರ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಆದರೆ ನಾವು ಇಂದಿನ ಆಧುನಿಕ ಬದುಕಿನಲ್ಲಿ ಬಳಸುವ ಫ್ರಿಜ್ ಎಸಿಗಳ ಸಿ.ಎಫ್.ಸಿಯಿಂದ ಓಝೋನ್ ಪದರ ಶಿಥಿಲಗೊಳ್ಳತ್ತಿದೆ ಇದರ ಸಂಪೂರ್ಣ ಅರಿವನ್ನು ನಾವು ಇಂದು ಪಡೆಯಬೇಕು ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಐಕ್ಯೂಎಸಿ ಸಂಯೋಜಕರಾದ ಡಾ| ಸುಜಾತ ಹೆಚ್ ಆರ್ ಮತ್ತು ಕಾಲೇಜಿನ ಸ್ಟಾರ್ ಕಾಲೇಜು ಸ್ಕೀಮ್‌ನ ಸಂಯೋಜಕರಾದ ಶ್ರುತಿ ಹಾಗೂ ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಸುಪ್ರೀತ್ ಕಾಡಕೋಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಪ್ರಶಸಿ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ವಿಲಾಸ್ ಸ್ವಾಗತಿಸಿದರು. ನಿಶಾ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here