Wednesday, April 10, 2024

ನರೇಶ್‌ಕುಮಾರ್ ಸಸಿಹಿತ್ಲುಗೆ ರಾಷ್ಟ್ರೀಯ ಯುವ ಪ್ರಶಸ್ತಿ

ಮಂಗಳೂರು : ಇಂಟರ್ ನ್ಯಾಷನಲ್‌ಯೂತ್ ಸೊಸೈಟಿ (ಐವೈಎಸ್) ಮತ್ತು ನ್ಯಾಷನಲ್‌ಯೂತ್‌ ಅವಾರ್ಡ್ ಫೆಡರೇಶನ್‌ ಆಫ್‌ ಇಂಡಿಯಾ ಇವರು ಸಾಧಕ ಯುವಕರಿಗೆ ಕೊಡಮಾಡುವ 2019 ನೇ ಸಾಲಿನ ರಾಷ್ಟ್ರೀಯಯುವ ಪ್ರಶಸ್ತಿಗೆ ಪತ್ರಕರ್ತ, ಯುವವಾಹಿನಿ (ರಿ) ಕೇಂದ್ರ ಸಮಿತಿಯಅಧ್ಯಕ್ಷ ನರೇಶ್‌ಕುಮಾರ್ ಸಸಿಹಿತ್ಲು ಆಯ್ಕೆಯಾಗಿದ್ದಾರೆ.
ದೇಶದಾದ್ಯಂತ 20 ಮಂದಿ ಸಾಧಕಯುವಕ-ಯುವತಿಯರಿಗೆ ಪ್ರತಿ ವರುಷ ಈ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿಕರ್ನಾಟಕದಿಂದ ಐದು ಮಂದಿ ಆಯ್ಕೆಗೊಂಡಿದ್ದಾರೆ.
ಅ.13ರಂದು ನವದೆಹಲಿಯ ಇಂಡಿಯಾಗೇಟ್ ಬಳಿ ಇರುವ ಆಂಧ್ರಭವನದ ಡಾ.ಬಿ.ಆರ್‌ಅಂಬೇಡ್ಕರ್‌ ಅಡಿಟೋರಿಯಂನಲ್ಲಿ ನಡೆಯುವ ಸಮಾರಂಭದಲ್ಲಿಕೇಂದ್ರ ಸಚಿವರಾದರಾಮದಾಸ್ ಅಠವಳೆ, ಜಿ.ಕೃಷ್ಣಾರೆಡ್ಡಿ, ಪ್ರತಾಪ್‌ಚಂದ್ರ ಸಾರಂಗಿ, ಕಿರಣ್‌ರಿಜುಲು, ಅಂತರಾಷ್ಟ್ರೀಯ ಶಾಂತಿ ಪ್ರತಿಪಾದಕರಾದ ನೇಪಾಳದ ಆಚಾರ್ಯಗುರುಕರ್ಮತನ್‌ಪಾಲ್, ರಾಷ್ಟ್ರೀಯಯುವ ನೀತಿಯ ಸ್ಥಾಪಕ ಡಾ.ಎಸ್.ಎನ್ ಸುಬ್ಬರಾವ್, ರಾಜ್ಯ ಸಭಾ ಸದಸ್ಯ ಡಾ.ನರೇಂದ್ರಜಾಧವ್, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯಧ್ಯಾನೇಶ್ವರ್ ಮುಳೆ, ಸಂಸದ ಮನೋಜ್‌ತಿವಾರಿ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ನರೇಶ್‌ಕುಮಾರ್‌ಅವರಿಗೆ ಈಗಾಗಲೇ ದಕ್ಷಿಣಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಜಿಲ್ಲಾಯುವ ಪ್ರಶಸ್ತಿ ನೀಡಿ ಗೌರವಿಸಿದೆ, ಇದಲ್ಲದೆ ಬಸವಶ್ರೀ ರಾಜ್ಯಯುವ ಪ್ರಶಸ್ತಿ, ಯುಗಪುರುಷ ರಾಜ್ಯೋತ್ಸವ ಪ್ರಶಸ್ತಿ ಮತ್ತು ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಲೇಖಕ, ನಾಟಕಕಾರ, ನಿರ್ದೇಶಕ, ನೃತ್ಯಪಟುವಾಗಿ ಗುರುತಿಸಿಕೊಂಡಿರುವ ನರೇಶ್‌ಕುಮಾರ್‌ಇವರು ಮೂಲ ಜಾನಪದ ಕುಣಿತಗಳ ಅಧ್ಯಯನ, ತರಭೇತಿ ಮತ್ತು ಪ್ರದರ್ಶನನೀಡುತ್ತಿದ್ದಾರೆ. ನೇಪಾಳ, ಅಸ್ಸಾಂ, ಒರಿಸ್ಸಾ, ದೆಹಲಿ ಸಹಿತದೇಶದ ಹತ್ತಕ್ಕೂ ಅಧಿಕರಾಜ್ಯದಲ್ಲಿ ಮತ್ತುರಾಜ್ಯದಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಒರಿಸ್ಸಾದ ಭುವನೇಶ್ವರದಲ್ಲಿ ನಡೆದಿದ್ದ ಅಂತರ್‌ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಇವರು, ಫೇಸ್‌ಎನ್ನುವಟ್ರಸ್ಟ್‌ಕಟ್ಟಿ ಈ ಮೂಲಕ ಹತ್ತಾರು ಕಾರ್ಯಕ್ರಮ ಉಚಿತ ಕೌನ್ಸಿಲಿಂಗ್ ಸೆಂಟರ್ ನಡೆಸುತ್ತಿದ್ದಾರೆ. ತಿಂಗೋಳ್ದ ಬೊಲ್ಪುಎನ್ನುವ ತುಳು ಕಥಾ ಸಂಕಲನ ಪ್ರಕಟಿಸಿರುವ ಇವರು, ಬೀರೆದಡೆನ್ನಾನಎನ್ನುವ ತುಳು ಜಾನಪದ ಶೈಲಿಯ ಹಾಡುಗಳ ಸಿ.ಡಿ ನಿರ್ಮಾಣ ಮಾಡಿದ್ದಾರೆ. ಜ್ಯೋತಿರ್ನಾದ, ಬ್ರಹ್ಮಶ್ರೀ ನಾರಾಯಣಗುರು ಮುಂತಾದ ಭಜನಾ ಸಿ.ಡಿಗಳಿಗೆ ಗೀತಾ ಸಾಹಿತ್ಯ ಒದಗಿಸಿದ್ದು, 12 ತುಳು ನಾಟಕ ರಚಿಸಿದ್ದಾರೆ. ಐದು ತುಳು ಸಿನಿಮಾದಲ್ಲಿ ನಟಿಸಿರುವ ಇವರು, ಕರ್ನಾಟಕ ತುಳು ಸಾಹಿತ್ಯಅಕಾಡೆಮಿಯ ಮಾಜಿ ಸದಸ್ಯರೂ ಹೌದು.ಯುವವಾಹಿನಿ (ರಿ) ಕೇಂದ್ರ ಸಮಿತಿಯಅಧ್ಯಕ್ಷರಾಗಿದ್ದು, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ದ.ಕ. ಉಡುಪಿ ಜಿಲ್ಲೆಗೆ ಇಂದು ರಜೆ ಘೋಷಣೆ : ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ

ಮಂಗಳೂರು: ಈದ್ ಉಲ್-ಫಿತರ್ ಪ್ರಯುಕ್ತ ಏಪ್ರಿಲ್ 10ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ...

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...