ಬಿ.ಸಿ.ರೋಡ್ : ನಾಗಾರಾಧನೆ ವಿಶಿಷ್ಠ ಸಂಪ್ರದಾಯವಾಗಿದೆ. ಸಂಪತ್ತಿನ ಸದ್ವಿನಿಯೋಗದ ಅಭಿವೃದ್ಧಿಯ ಕಾಯಕವೇ ಧರ್ಮನೇಮ, ನಾಗಮಂಡಲೋತ್ಸವ, ನಡಾವಳಿಗಳು. ಈ ಎಲ್ಲವೂ ಪರಶುರಾಮನ ಸಷ್ಠಿಯಲ್ಲಿ ಬರುತ್ತದೆ. ನಾಗಮಂಡಲೋತ್ಸವದಲ್ಲಿ ಅನ್ನದಾನ ಜಾಸ್ತಿಯಾಗಬೇಕು ಹಾಗೆಯೇ ಹಿಂಗಾರ ಸಮರ್ಪಣೆಯೂ ಜಾಸ್ತಿಯಾದಷ್ಟು ನಾಗಮಂಡಲೋತ್ಸವಕ್ಕೆ ಜಾಸ್ತಿ ಶಕ್ತಿ ಬರುತ್ತದೆ ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಬುಧವಾರ ಪುದು ಗ್ರಾಮದ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಜನವರಿ ೧೬ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಅನುಜ್ಞಾ ಕಲಶವವನ್ನು ಮಾಡಿ, ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಾಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ನಾಗಮಂಡಲೋತ್ಸವಕ್ಕೆ ಸುಮಾರು ೨೫ ಸಾವಿರಕ್ಕೂ ಜಾಸ್ತಿ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ. ಈ ಭಾಗದಲ್ಲಿ ನಾಗಮಂಡಲವಾಗುವುದು ಭಾರೀ ಅಪರೂಪ. ಪುದು, ಅರ್ಕುಳ, ಮೇರಮಜಲು, ಕೊಡ್ಮಾಣ್, ತುಂಬೆ, ಕಳ್ಳಿಗೆ ಹೀಗೆ ಆರು ಗ್ರಾಮಗಳ ಗ್ರಾಮಸ್ಥರು ಸೇರಿಕೊಂಡು ನಮ್ಮೂರಿನ ನಾಗಮಂಡಲೋತ್ಸವನ್ನು ಮುನ್ನಡೆಸೋಣ ಎಂದರು.
ಅಷ್ಟಪವಿತ್ರ ಬ್ರಹ್ಮಕಲಶೋತ್ಸವದಂದು ೫೦ ಸಾವಿರ ಹಾಳೆ ಬಟ್ಟಲನ್ನು ಕ್ಷೇತ್ರದಲ್ಲಿ ತಯಾರಿಸುವ ಶರತ್ ಕುಮಾರ್ ಕಬೇಲರವರನ್ನು ಗೌರವಿಸಲಾಯಿತು. ಸಂದೇಶ್ ಕುಂಪಣಮಜಲು ಶ್ರೀ ಕ್ಷೇತ್ರದ ಕಾರಣಿಕವನ್ನು ಇರಿಸಿಕೊಂಡು ಧ್ವನಿ ಸುರುಳಿಯನ್ನು ಮಾಡಿದ್ದು ಆ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸುವುದರ ಜೊತೆಗೆ ಅವರನ್ನು ಗೌರವಿಸಲಾಯಿತು. ವಾಸುದೇವ ಕೊಟ್ಟಾರಿ ಹಾಗೂ ನಾಗಮಂಡಲೋತ್ಸವ ಸಮಿತಿ ಪ್ರಧಾನ ಸಂಚಾಲಕ ತೇವು ತಾರನಾಥ ಕೊಟ್ಟಾರಿ ಮತ್ತು ವಾಸುದೇವ ಕೊಟ್ಟಾರಿ ಮಾತನಾಡಿದರು.
ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಶ್ಯ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಚಂದ್ರಶೇಖರ ತೇಜ, ಉಮೇಶ್ ಶೆಟ್ಟಿ ಬರ್ಕೆ, ಪದ್ಮನಾಭ ಶೆಟ್ಟಿ ಪುಂಚಮೆ, ವಜ್ರನಾಭ ಶೆಟ್ಟಿ ಅರ್ಕುಳಬೀಡು, ಪೊಳಲಿ ಕೃಷ್ಣ ತಂತ್ರಿ, ಕ್ಷೇತ್ರ ಅಧ್ಯಕ್ಷ ಪೂವಪ್ಪ ಬಂಗೇರ ನಾಣ್ಯ, ಕಂಪ ಸದಾನಂದ ಆಳ್ವ, ನಾರಾಯಣ ದೊಂಪದಕೋಡಿ, ಭಾಸ್ಕರ ಚೌಟ ಕುಮ್ಡೇಲ್, ಜಗನ್ನಾಥ ಚೌಟ ಮಾಣಿ, ಕೃಷ್ಣ ಕುಮಾರ್ ಪೂಂಜ, ರಾಮಚಂದ್ರ ಬಂಗೇರ, ಮಾಧವ ನಾಣ್ಯ, ಮಾಧವ ವಳವೂರು, ಮೋಹನ ಎಸ್., ಶ್ರೀಧರ ನಾಣ್ಯ, ಸುದೇಶ್ ನಾಣ್ಯ, ವಿನಯ ಕಡೆಗೋಳಿ ಉಪಸ್ಥಿತರಿದ್ದರು. ದೇವದಾಸ ಶೆಟ್ಟಿ ಕೊಡ್ಮಾಣ್ ಸ್ವಾಗತಿಸಿ ಪ್ರವೀಣ್ ಶೆಟಿ ಧನ್ಯವಾದ ಸಮರ್ಪಿಸಿದರು. ದಿನೇಶ್ ಕೊಟ್ಟಿಂಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here