ಆತ್ಮೀಯ ಓದುಗರೇ..
ದೀಪಾವಳಿಯ ಶುಭಾಶಯಗಳು… ಹೊಸ ಕನಸು, ಸಮಾಜಮುಖಿ ಆಶಯಗಳೊಂದಿಗೆ ಎರಡು ವರ್ಷದ ಹಿಂದೆ ದೀಪಾವಳಿಯ ಬೆಳಕಿನಲ್ಲಿಯೇ ಆರಂಭಗೊಂಡ “ನಮ್ಮ ಬಂಟ್ವಾಳ ಡಾಟ್ ಕಾಮ್” ಈ ದೀಪಾವಳಿಯ ಹೊಸ್ತಿಲಿನಲ್ಲಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಒಬ್ಬರು, ಇಬ್ಬರು, ಹತ್ತು, ನೂರು ಎಂದು ಬೆಳೆಯುತ್ತಾ ಹೋದ ನಮ್ಮ ಬಂಟ್ವಾಳ ವೆಬ್ ನ್ಯೂಸ್ ಓದುಗರ ಸಂಖ್ಯೆ ಈಗ 13 ಲಕ್ಷವನ್ನೂ ದಾಟಿ ಬೆಳೆಯುತ್ತಿರುವುದು ಅಭಿಮಾನದ ಸಂಗತಿ.

ಬಂಟ್ವಾಳ ತಾಲೂಕು ಸಹಿತ, ಜಿಲ್ಲೆಯಾದ್ಯಂತ ನಡೆಯುವ ವಿವಿಧ ಕ್ಷಣ ಕ್ಷಣ ದ ಸುದ್ದಿಯನ್ನು ಓದುಗರಿಗೆ ಕ್ಷಿಪ್ರವಾಗಿ ತಲುಪಿಸುವ ಮೂಲಕ ನಮ್ಮ ಬಂಟ್ವಾಳ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಅನೇಕ ಪ್ರತಿಭೆಗಳ ಅನ್ವೇಷಣೆ ಹಾಗೂ ಸಮಾಜ ಸೇವಕರನ್ನು ಗುರುತಿಸಿ ಪರಿಚಯಿಸುವ ಕಾರ್ಯವನ್ನೂ ನಮ್ಮ ಬಂಟ್ವಾಳ ಮಾಡಿದೆ, ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಆಡಳಿತ ವ್ಯವಸ್ಥೆಯ ಮುಂದಿಟ್ಟು ಪರಿಹಾರ ಕಂಡುಕೊಳ್ಳುವ ಕಾಳಜಿಯ ಸುದ್ದಿ ಮಾತ್ರವಲ್ಲದೆ, ಬಂಟ್ವಾಳ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ “ನಮ್ಮ ಬಂಟ್ವಾಳ ಡಾಟ್ ಕಾಮ್” ಮುನ್ನಡೆಯುತ್ತಿದೆ.
ಎರಡು ವರ್ಷದ ಪಯಣದಲ್ಲಿ “ನಮ್ಮ ಬಂಟ್ವಾಳ ಡಾಟ್ ಕಾಮ್” ನ ಯಶಸ್ಸಿನಲ್ಲಿ ಹಲವರ ಶ್ರಮವಿದೆ, ನಮ್ಮ ಬಂಟ್ವಾಳದ ಎಲ್ಲಾ ಓದುಗರಿಗೆ, ಜಾಹೀರಾತುದಾರರಿಗೆ, ವಿವಿಧ ಮಾಧ್ಯಮಗಳ ಸ್ನೇಹಿತರಿಗೆ, ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡಿದ ಸರ್ವರನ್ನೂ ಈ ಸಂದರ್ಭದಲ್ಲಿ ಮನಪೂರ್ವಕವಾಗಿ ಸ್ಮರಿಸುತ್ತಾ, ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
ನಿಮ್ಮ ಸಲಹೆ-ಸಹಕಾರ ಮುಂದೆಯೂ ನಮ್ಮ ಜೊತೆಗಿರಲಿ..

-ಪ್ರಶಾಂತ್ ಪೂಂಜಾಲಕಟ್ಟೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here