ವಾಪಿ, ತುಳುನಾಡ ಐಸಿರಿ ಕಲಾವಿದರ ಪ್ರೋತ್ಸಹ ಹಾಗೂ ಹೊರನಾಡಿನಲ್ಲೂ ತುಳುನಾಡ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ, ಕನ್ನಡ-ತುಳು ಭಾಷೆ ಉಳಿವುವಿನ ಜೊತೆಗೆ ನಮ್ಮವರಿಗೆ ಭಾಷಾ ಪ್ರೇರಿತ ಮನೋರಂಜನೆ ಮತ್ತು ನಮ್ಮವರನ್ನು ಒಗ್ಗೂಡಿಸುವ ಕಾರ್ಯ ಐಸಿರಿ ಸಂಸ್ಥೆ ಮಾಡುತ್ತಿದೆ.

ಆ ನಿಮಿತ್ತ ಇದೇ ಮಂಗಳವಾರ (ಅ.೧೫) ಸಂಜೆ ವಾಪಿ ಚಾರ್‌ರಸ್ತಾ ಇಲ್ಲಿನ ಜಿಐಡಿಸಿ ಸನಿಹದ ವಿಐಎ ಸಭಾಗೃಹದಲ್ಲಿ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ತೆಳಿಕೆದಬೊಳ್ಳಿ ಲ| ದೇವದಾಸ್ ಕಾಪಿಕಾಡ್ ರಚನೆ, ನಿರ್ದೇಶನದ, ಪುಷ್ಪಕ್ಕನ ವಿಮಾನ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪಂಚ ಗ್ರಾಮಗಳಾದ ಸೂರತ್, ವಲ್ಸಡ್, ಉಮ್ಮರ್ಗಾಂ, ಸಿಲ್ವಾಸ, ದಮನ್ ಪರಿಸರದ ಉದ್ಯಮಿಗಳು, ಸಮಾಜ ಸೇವಕರು, ಸಂಘಟಕರು ಈ ಕಾರ್ಯಕ್ರಮದಲ್ಲಿ ಭಾಗವಾಯಿಸುವರೇ ಕನ್ನಡ, ತುಳು ಅಭಿಮಾನಿಗಳು, ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ, ಗೌರವಾಧ್ಯಕ್ಷ ಸದಾಶಿವ ಪೂಜಾರಿ, ಯೋಜನಾ ಕಾರ್ಯಾಧ್ಯಕ್ಷ ಮೆಲ್‌ಕಾಂ ಪಿರೇರಾ, ಕಾರ್ಯದರ್ಶಿ ಉದಯ ಬಿ.ಶೆಟ್ಟಿ ಹಾಗೂ ಭಾಸ್ಕರ್ ಸರಪಾಡಿ (೭೩೫೩೧೩೬೬೭೯) ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here