ಬಂಟ್ವಾಳ: ಬಹುನಿರೀಕ್ಷೆಯ ಬಿ.ಸಿ.ರೋಡು ಸುಂದರೀಕರಣ ಯೋಜನೆಯ ಅನುಷ್ಠಾನಕ್ಕೆ ಪ್ರಾರಂಭದಲ್ಲಿ 15 ಕೋ.ರೂ.ಗಳನ್ನು ನಿಗದಿ ಪಡಿಸಲಾಗಿತ್ತಾದರೂ, ಪ್ರಸ್ತುತ ಎಲ್ಲಾ ಕಾಮಗಾರಿಗಳನ್ನು ಜೋಡಿಸುವಾಗ 20 ಕೋ.ರೂ.ಗಳ ಅಂದಾಜು ವೆಚ್ಚವನ್ನು ತಗಲಲಿದ್ದು, ಅ. 21ಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಶನಿವಾರ ಬಿ.ಸಿ.ರೋಡಿನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸುಂದರೀಕರಣ ಯೋಜನೆಯ ಎಲ್ಲಾ ರೂಪುರೇಖೆಗಳು ಸಿದ್ಧಗೊಂಡಿದ್ದು, ಶಿಲಾನ್ಯಾಸಕ್ಕೆ ಪೂರ್ವಭಾವಿಯಾಗಿ ಅ. 21ರಂದು ಬೆಳಗ್ಗೆ 9ಕ್ಕೆ ಬಂಟ್ವಾಳದ ಐಬಿಯಲ್ಲಿ ಮಂಗಳೂರಿನ ವಿನ್ಯಾಸಕಾರ ಧರ್ಮರಾಜ್ ಅವರು ಸಂಬಂಧಪಟ್ಟ ಪ್ರಾಯೋಜಕರು ಹಾಗೂ ಸಮಿತಿಗೆ ಯೋಜನೆಯನ್ನು ವಿವರಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಲಿದ್ದು, ಕಂದಾಯ ಸಚಿವ ಆರ್.ಅಶೋಕ್, ಸಂಸದ ನಳಿನ್‍ಕುಮಾರ್ ಕಟೀಲು ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶಿಲಾನ್ಯಾಸದ ಬಳಿಕ ಸರಕಾರಿ ಕಾರ್ಯಕ್ರಮವಾಗಿ ಸುಮಾರು 700 ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ನಡೆಯಲಿದೆ.
ಉದ್ಯಮಿಗಳಾದ ಶಶಿಕಿರಣ್ ಶೆಟ್ಟಿ, ಸಂತೋಷ್‍ಕುಮಾರ್, ಬಿ.ಎ.ಮೊೈದಿನ್, ಜೆರಾಲ್ಡ್ ಡಿಮೆಲ್ಲೊ, ಜಗನ್ನಾಥ ಶೆಣೈ ಮೊದಲಾದವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಎಂಆರ್‍ಪಿಎಲ್, ಎನ್‍ಎಂಪಿಟಿ., ಒಎನ್‍ಜಿಸಿ, ಎಚ್‍ಪಿಸಿಎಲ್, ಬಿಪಿಸಿಎಲ್, ಐಒಸಿಎಲ್ ಅವರು ತಮ್ಮ ಸಿಎಸ್‍ಆರ್ ಅನುದಾನದಿಂದ ಸಹಕಾರ ನೀಡಲಿದ್ದಾರೆ.
ಯೋಜನೆಯಲ್ಲಿ 2 ಕೋ.ರೂ.ವೆಚ್ಚದ ಸಿಸಿ ಕ್ಯಾಮರಾ, ಸರ್ವೀಸ್ ರಸ್ತೆಯಲ್ಲಿ ಪುಟ್‍ಪಾತ್, ವಾರದ ಸಂತೆ, ಕೈಕುಂಜೆ ರಸ್ತೆ ಅಗಲೀಕರಣ, ಬಸ್ ನಿಲ್ದಾಣದ ಮುಂಭಾಗ ಸರ್ಕಲ್, ಬೀದಿದೀಪ, ಪಾರ್ಕಿಂಗ್ ಸೌಲಭ್ಯ ಇರುತ್ತದೆ. ಅನುಷ್ಠಾನಕ್ಕೆ 10 ಕೋ.ರೂ.ಗಳ ಸಿಎಸ್‍ಆರ್ ಅನುದಾನ ಲಭ್ಯವಾದರೆ, ಸಿಎಂ ಈಗಾಗಲೇ 5 ಕೋ.ರೂ.ಗಳನ್ನು ಘೋಷಿಸಿದ್ದಾರೆ. ಜತೆಗೆ ಕ್ಷೇತ್ರಕ್ಕೆ ನೀಡಿದ ಅನುದಾನದಲ್ಲಿ 2 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ವಿವರಿಸಿದರು.

ಎಫ್‍ಎಸ್‍ಎಸ್‍ಎಂ ಪದ್ಧತಿ ಯುಜಿಡಿ
ಯೋಜನೆಯ ಅನುಷ್ಠಾನದ ವೇಳೆ ಯಾವುದೇ ಒತ್ತಡಗಳಿಗೆ ಮಣಿಯದೆ ಈ ಹಿಂದೆ ಭೂಸ್ವಾ„ೀನ ಪಡಿಸಿಕೊಂಡ ಸ್ಥಳಗಳಲ್ಲಿನ ಅತಿಕ್ರಮಣ ತೆರವುಗೊಳಿಸಲಾಗುತ್ತದೆ. ಆದರೆ ಹೊಸ ಭೂಸ್ವಾ„ೀನ ಇರುವುದಿಲ್ಲ. ಜತೆಗೆ ಬಂಟ್ವಾಳ ನಗರ ಒಳಚರಂಡಿ ವ್ಯವಸ್ಥೆಗೆ ಎಫ್‍ಎಸ್‍ಎಸ್‍ಎಂ ಪದ್ಧತಿ ಜಾರಿಗೆ ಬರಲಿದ್ದು, ಸುಮಾರು 56 ಕೋ.ರೂ.ಗಳಲ್ಲಿ ಅದು ಅನುಷ್ಠಾನವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಜಿ.ಆನಂದ, ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ, ಸಂತೋಷ್‍ಕುಮಾರ್ ರೈ ಬೋಳಿಯಾರ್, ರಾಮದಾಸ ಬಂಟ್ವಾಳ, ಪ್ರಭಾಕರ ಪ್ರಭು, ಮೋನಪ್ಪ ದೇವಸ್ಯ, ನಾರಾಯಣ ಶೆಟ್ಟಿ, ವಿಜಯ ರೈ, ರಮಾನಾಥ ರಾಯಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here