ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಈ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಬೇಟಿ ಮಾಡಿ ಚರ್ಚಿಸಿದರು.
ಬಂಟ್ವಾಳದ ವಿವಿಧ ಸಹಕಾರಿ ಸಂಘ ಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ಚೆಕ್ಕುಗಳನ್ನು ಹಸ್ತಾಂತರಿಸಿದರು.
ಬಂಟ್ವಾಳ ನಗರ ಠಾಣೆಯನ್ನು ವೃತ್ತ ನಿರೀಕ್ಷಕರ ದರ್ಜೆಗೆ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿ ಚರ್ಚಿಸಿದರು.
ಆರೋಗ್ಯ ಸಚಿವ ಶ್ರೀ ರಾಮುಲು ರವರನ್ನು ಬೇಟಿ ಮಾಡಿ ಪುಂಜಾಲಕಟ್ಟೆ ಪ್ರಾಥಮಿಕ ಹಾಗೂ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡುವ ಬಗ್ಗೆ ಮಾತುಕತೆ ನಡೆಸಿದರು. ಸಚಿವರು ವಿಧಾನಸಭಾ ಅಧಿವೇಶನದ ಬಳಿಕ ಬಂಟ್ವಾಳಕ್ಕೆ ಬೇಟಿ ನೀಡುವುದಾಗಿ ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ರವರಲ್ಲಿ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ವಿಧ್ಯಾರ್ಥಿಗಳು ನೀಡಿರುವ ಲಿಖಿತ ದೂರಿನ ಬಗ್ಗೆ ತಿಳಿಸಿ ಸಚಿವರ ಗಮನ ಸೆಳೆದರು. ಈ ಬಗ್ಗೆ ಸಂಬಂಧಿಸಿದ ಉಪ ಕುಲಪತಿಯವರಿಗೆ ತಕ್ಷಣ ಗಮನಹರಿಸುವಂತೆ ಸಚಿವರು ಸೂಚಿಸಿದರು.