ಭಾರತದ ಮಾತೃ ಸಂಸ್ಕೃತಿಗೆ ಜಗತ್ತಿನೆಲ್ಲೆಡೆ ಗೌರವವಿದೆ. ಧರ್ಮದ ರಕ್ಷಣೆಗಾಗಿ ಮಾತೃ ಶಕ್ತಿ ಎದ್ದು ನಿಂತರೆ ಎದುರಿಸಿ ನಿಲ್ಲುವುದು ಕಷ್ಟಸಾಧ್ಯ. ಮಾತೆಯರ ಸಂಸ್ಕೃತಿ ಪಾಠದ ಮೂಲಕವೇ ಹಿಂದೂ ಸಮಾಜ ಸದೃಢವಾಗಿ ಎದ್ದು ನಿಂತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಸೋಮವಾರ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ನಡೆದ 37ನೇ ಶಾರದೋತ್ಸವದ ಧಾರ್ಮಿಕ ಸಭೆಯಲ್ಲಿ ಗ್ರಾಮ ಗೌರವ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪುವೆಲ್ ಮಾತನಾಡಿ ಹಿಂದೂ ಧರ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಜಾತಿ, ಉಪಜಾತಿ, ಅಂತಸ್ತು, ಅಧಿಕಾರ ಎಲ್ಲವನ್ನೂ ಮೀರಿ ಸಂಘಟಿತರಾದಾಗ ಮಾತ್ರ ಧರ್ಮ, ಅಸ್ಮಿತೆ ಉಳಿಯ ಬಹುದು. ಮತಾಂತರವೆಂಬ ಪಿಡುಗು ಸಾಮಾಜಿಕ ಮಹಾ ಮಾರಿಯಾಗುವುದರಕ್ಕಿಂತ ಮುಂಚೆ ಹಿಂದೂ ಬಂಧವರೆಲ್ಲರೂ ಜಾಗೃತಿಯಾಗಬೇಕು ಮತ್ತು ಧರ್ಮ ಜಾಗೃತಿ ಮೂಡಿಸಬೇಕೆಂದರು.
ನಿವೃತ್ತ ಸೈನಿಕ ಕಿಶೋರ್ ಕುಮಾರ್ ಭಾಗವಹಿಸಿದ್ದರು.
ಗ್ರಾಮ ಗೌರವ: ಇದೇ ಸಂದರ್ಭದಲ್ಲಿ ಗ್ರಾಮದ ಮೂವರನ್ನು ಗುರುತಿಸಿ ಗ್ರಾಮ ಗೌರವ ನೀಡಲಾಯಿತು. ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಭಟ್, ಸರವು ಅಂಗನವಾಡಿ ಕಾರ್ಯಕರ್ತೆ ಹೇಮಮಾಲಿನಿ, ಗುಡಿ ಕೈಗಾರಿಕೆಯ ಮಹಿಳೆ ಸೋನೆ ಅವರನ್ನು ಗೌರವಿಸಲಾಯಿತು.
ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಅಜಯ ಶಾಸ್ತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ವಿನಯ ನಟ್ಟಿ ವಂದಿಸಿದರು. ರಾಮಕೃಷ್ಣ ಮೂಡಂಬೈಲು ಸನ್ಮಾನಿತರನ್ನು ಪರಿಚಯಿಸಿದರು. ಸಹ ಶಿಕ್ಷಕಿ ಸಾವಿತ್ರಿ ಬಹುಮಾಣ ವಿಜೇತರ ಪಟ್ಟಿ ವಾಚಿಸಿದರು ಉಪನ್ಯಾಸಕ ವೆಂಕಟ್ರಮಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here