ವಿಟ್ಲ: ವಿಠಲ ವಿದ್ಯಾಸಂಘದ ಆಶ್ರಯದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ಅನುದಾನಿತ ಪ್ರೌಢಶಾಲೆ ಕಳೆದ ಎಪ್ಪತ್ತು ವರ್ಷಗಳಿಂದ ವಿಟ್ಲದಲ್ಲಿ ವಿದ್ಯಾರ್ಜನೆ ನಡೆಸುತ್ತಿದ್ದು, ಇದರ ಸಮೀಪದಲ್ಲಿ ಇನ್ನೊಂದು ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ತೆರೆಯದಂತೆ ಶಾಲಾಡಳಿತದ ವತಿಯಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಿಠಲ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ೮ನೇ ತರಗತಿಯಲ್ಲಿ 145, 9ನೇ ತರಗತಿಯಲ್ಲಿ 330, 10ನೇ ತರಗತಿಯಲ್ಲಿ 298 ಸೇರಿ ಒಟ್ಟು 773 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಕಲೇಶಪುರ, ವಿಜಯಪುರ, ಬಾಗಲಕೋಟೆ, ಮೂಡಿಗೆರೆ ಮತ್ತು ಕುಶಾಲನಗರ ಭಾಗದಿಂದ ವಿದ್ಯಾರ್ಥಿಗಳನ್ನು ಕರೆ ತಂದು ದಾಖಲಾತಿ ಮಾಡಲಾಗುತ್ತಿದೆ. ಕೂಗಳತೆಯಲ್ಲಿ ಮತ್ತೊಂದು ಕನ್ನಡ ಮಾಧ್ಯಮ ಸರಕಾರಿ ಪ್ರೌಢಶಾಲೆಯಾದಲ್ಲಿ ಅನುದಾನಿತ ಶಾಲೆಯ ಅಸ್ತಿತ್ವಕ್ಕೇ ಧಕ್ಕೆಯಾಗುವ ಅಪಾಯವಿದೆ. ಅನುಮತಿ ನೀಡುವ ಮೊದಲು ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಶಾಲಾ ಸಂಚಾಲಕ ಎಲ್.ಎನ್. ಕೂಡೂರು, ವಿಠಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here